ದಾಖಲೆಯಿಲ್ಲದ 4.3 ಲಕ್ಷ ರೂ. ವಶಕ್ಕೆ

4.3 lakhs of unrecorded Rs. into custody
ತೇರದಾಳ ಪಟ್ಟಣದ ನಾಲ್ಕನೆ ಕಾಲುವೆ ಬಳಿಯ ಚೆಕ್‌ಪೋಸ್ಟ್‌ದಲ್ಲಿ ತಪಾಸಣೆ ನಿರತ ಸಿಬ್ಬಂದಿ. ಪಿಎಸ್‌ಐ ಅಪ್ಪು ಐಗಳಿ, ಚುನಾವಣೆ ಸಿಬ್ಬಂದಿ ಸದಾಶಿವ ತೆಳಗಿನಮನಿ ಇದ್ದರು.
Published on

ತೇರದಾಳ: ಲೋಕಸಭೆ ಚುನಾವಣೆ ಹಿನ್ನೆಲೆ ತೇರದಾಳ-ಕುಡಚಿ ರಸ್ತೆಯ ನಾಲ್ಕನೇ ಕಾಲುವೆ ಬಳಿ ನಿರ್ಮಿಸಿದ ಚೆಕ್‌ಪೋಸ್ಟ್‌ದಲ್ಲಿ ಭಾನುವಾರ ಸಂಜೆ ತಪಾಸಣೆ ವೇಳೆ ದಾಖಲೆ ಇಲ್ಲದ 4.3 ಲಕ್ಷ ರೂಗಳನ್ನು ಕರ್ತವ್ಯದಲ್ಲಿದ್ದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಿಂದ ತೇರದಾಳ ಮಾರ್ಗವಾಗಿ ಹೋಗುತ್ತಿದ್ದ ಕಾರ್‌ನ್ನು ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಹಣ ಪತ್ತೆ ಆಗಿದೆ. ಹಣಕ್ಕೆ ಸೂಕ್ತ ದಾಖಲೆ ಇಲ್ಲದ್ದರಿಂದಾಗಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ತೇರದಾಳ ಚೆಕ್‌ಪೋಸ್ಟ್‌ದಲ್ಲಿ ಇದು 7ನೇ ಪ್ರಕರಣವಾಗಿದೆ. ಪಿಎಸ್‌ಐ ಅಪ್ಪು ಐಗಳಿ, ಸದಾಶಿವ ತೆಳಗಿನಮನಿ, ವಿಠ್ಠಲ ಮಾನೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net