

ಮಡಿಕೇರಿ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪.೨೩ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೮.೯೫ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ ೪.೭೫ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೪.೭೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨.೭೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩.೪೦, ನಾಪೋಕ್ಲು ೩.೬೦, ಸಂಪಾಜೆ ೨೩, ಭಾಗಮಂಡಲ ೫.೮೦, ಹುದಿಕೇರಿ ೭.೬೦, ಶ್ರೀಮಂಗಲ ೧.೪೦, ಪೊನ್ನಂಪೇಟೆ ೪, ಬಾಳೆಲೆ ೬.೦೨, ಸೋಮವಾರಪೇಟೆ ಕಸಬಾ ೫.೬೦, ಶನಿವಾರಸಂತೆ ೩, ಶಾಂತಳ್ಳಿ ೮, ಕೊಡ್ಲಿಪೇಟೆ ೨.೪೦, ಕುಶಾಲನಗರ ೨.೪೦, ಸುಂಟಿಕೊಪ್ಪ ೩ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಸೋಮವಾರ ೨೮೫೪.೫೫ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೫೧೭೧ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೬೦೦೦ ಕ್ಯುಸೆಕ್ ನೀರುಬಿಡಲಾಗುತ್ತಿದೆ.