

ಹಾಸನ: ನಗರ ಚಿಕ್ಕಹೊನ್ನೇನಹಳ್ಳಿ ಬಡಾವಣೆ, ಎಂಸಿಎಫ್ ಕ್ವಾಟ್ರಸ್ ಹಿಂಭಾಗದ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ 2.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 4.20 ಲಕ್ಷ ರೂ. ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.
ಮನೆ ಮಾಲೀಕ ಎಂ.ಸಿ. ಲೋಕೇಶ್ ಅವರು ಅ.02ರಂದು ಮಹಾಲಯ ಅಮಾವಾಸೆ ಹಬ್ಬಕ್ಕೆ ಕುಟುಂಬ ಸಮೇತ ಚನ್ನರಾಯಪಟ್ಟಣಕ್ಕೆ ಹೋಗಿದ್ದರು. ಅ.4ರಂದು ಹಬ್ಬ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನವಾಗಿರುವುದು ಕಂಡು ಬಂದಿದೆ.
ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆ ಬಾಗಿಲಿನ ಬೀಗ ಒಡೆದು ಬೀರುವಿನಲ್ಲಿದ್ದ 2,73,000 ರೂ. ಮೌಲ್ಯದ 39 ಗ್ರಾಂ ಚಿನ್ನ ಆಭರಣಗಳು, 60,000 ರೂ. ಮೌಲ್ಯದ 500 ಗ್ರಾಂ ಬೆಳ್ಳಿ ಪದಾರ್ಥಗಳು, 87,000 ರೂ. ನಗದು ಸೇರಿ ಒಟ್ಟು 4,20,000 ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ಘಟನೆ ಸಂಬಂಧ ಎಂ.ಸಿ. ಲೋಕೇಶ್ ಅವರು ಶುಕ್ರವಾರ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.