ಜು.೨೩ರಂದು ತೃತೀಯ ವರ್ಷದ ಕೆಸರುಗದ್ದೆ ಕ್ರೀಡಾಕೂಟ

0308a8e7-5717-4407-87e3-f891177e3c0b
Published on

ಮಡಿಕೇರಿ: ಅರ್ವತ್ತೊಕ್ಕಲು ಗ್ರಾಮದ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಹಿಂದೂ ಬಾಂಧವರಿಗಾಗಿ ತೃತೀಯ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಜು.೨೩ರಂದು ಗ್ರಾಮದ ತಳೂರು ಎಂ.ಚಂಗಪ್ಪ ಹಾಗೂ ಕುಶಾಲಪ್ಪರವರ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಸಲಹೆಗಾರ ಕೆ.ಜಿ.ಕೀರ್ತನ್ ತಿಳಿಸಿದರು.


ಪುರುಷರಿಗೆ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದ್ದು, ತಲಾ ೭ ಆಟಗಾರರಂತೆ ೧೬ ತಂಡಗಳಿಗೆ ಸೀಮಿತಗೊಳಿಸಲಾಗಿದೆ. ೩ ಓವರ್‌ಗಳ ಪಂದ್ಯಾಟ ಆಗಿರಲಿದ್ದು, ಪ್ರವೇಶ ಶುಲ್ಕ ೨ ಸಾವಿರ ನಿಗದಿಪಡಿಸಲಾಗಿದೆ. ೭ ಆಟಗಾರರಂತೆ ೧೬ ತಂಡಗಳಿಗೆ ಸೀಮಿತವಾಗಿ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಏರ್ಪಡಿಸಲಾಗಿದೆ. ಪುರುಷರಿಗೆ ೧,೫೦೦ ಹಾಗೂ ಮಹಿಳೆಯರಿಗೆ ೧ ಸಾವಿರ ಪ್ರವೇಶ ಶುಲ್ಕ ಇರಲಿದೆ. ಸಾರ್ವಜನಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕಾರ್ಯಕ್ರಮವನ್ನು ಹೆಚ್ಚು ಮನರಂಜನೀಯಗೊಳಿಸಲು ಪುರುಷರು ಮತ್ತು ಮಹಿಳೆಯರಿಗೆ ಕೆಸರುಗದ್ದೆ ಗೂಟ ಓಟದ ಸ್ಪರ್ಧೆ ಹಾಗೂ ದಂಪತಿಗಳಿಗೆ ಕೆಸರುಗದ್ದೆಯಲ್ಲಿ ಅಡಿಕೆ ಹಾಳೆಯಲ್ಲಿ ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಜು.೨೧ರ ಸಂಜೆ ೫ ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.


ಅಂದು ಬೆಳಗ್ಗೆ ೮ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳ ದಾನಿಗಳಾದ ತಳೂರು ಎಂ.ಚಂಗಪ್ಪ, ಕುಶಾಲಪ್ಪ ಮತ್ತು ದೇವರಾಜ್ ಉದ್ಘಾಟಿಸಲಿದ್ದಾರೆ. ಸಂಜೆ ೪ ಗಂಟೆಗೆ ಕ್ಲಬ್ ಅಧ್ಯಕ್ಷ ತಳೂರು ವಿವೇಕ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ವಾಲಗ ಕುಣಿತ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ತಳೂರು ಜೀತು ೭೩೪೯೫೨೭೩೩೭ ಸಂಪರ್ಕಿಸುವಂತೆ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ತಳೂರು ವಿವೇಕ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಗಿರಿ ಅಪ್ಪಯ್ಯ, ಜಂಟಿ ಕಾರ್ಯದರ್ಶಿ ಮನೋಜ್ ಆಚಾರ್ಯ, ಸದಸ್ಯ ಅನಿಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net