39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ

Eye Donate
Published on

ಬೆಂಗಳೂರು: ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷದಂತೆ ಈ ಬಾರಿ ಆ. 25 ರಿಂದ ಸೆ. 8ರವರೆಗೆ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಿಸಲಾಗುತ್ತಿದೆ.

ಈ ಅವಧಿಯಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನೇತ್ರ ಬ್ಯಾಂಕ್ ಜನರಲ್ಲಿ ನೇತ್ರದಾನದ ಮಹತ್ವ ಮತ್ತು ಅಗತ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ ಕಾರ್ನಿಯಲ್ ಅಂಧತ್ವದಿಂದ ಮಕ್ಕಳು ಮತ್ತು ಯುವಕರು ಎದುರಿಸುತ್ತಿರುವ ತೊಂದರೆಗಳು ನೇತ್ರ ಕಸಿ ಶಸಚಿಕಿತ್ಸೆಯಿಂದ ಈ ಅಂಧತ್ವವನ್ನು ನಿವಾರಿಸುವ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು.

ವ್ಯಕ್ತಿ ಮೃತಪಟ್ಟ ನಂತರ ಶವ ಸಂಸ್ಕಾರದ ಸಂದರ್ಭದಲ್ಲಿ ಕಣ್ಣುಗಳನ್ನು ಸುಡುವ ಅಥವಾ ಮಣ್ಣಿನಲ್ಲಿ ಹೂಳುವ ಬದಲು ದಾನ ಮಾಡಿದರೆ ಅಂಧತ್ವ ಸಮಸ್ಯೆ ಇರುವವರ ಬಾಳಿಗೆ ಬೆಳಕಾಗಬಹುದು ಎಂದು ನೇತ್ರ ಬ್ಯಾಂಕ್‌ನ ವ್ಯವಸ್ಥಾಪಕ ಟ್ರಸ್ಟಿ ಲಯನ್ ಪಿ.ಎಸ್. ಪ್ರೇಮನಾಥ್ ತಿಳಿಸಿದ್ದಾರೆ.

ವಿವರಗಳಿಗೆ ವೆಬ್‌ಸೈಟ್:www.lionsinternationaleyebankbangalore.in ವೀಕ್ಷಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net