3,905 ಲೀಟರ್ ಗೋವಾ ಮದ್ಯ ವಶಕ್ಕೆ

0102
Published on

ಬೆಳಗಾವಿ: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ಮಂಗಳವಾರ ದಾಳಿ ನಡೆಸಿದ ಅಬಕಾರಿ ಖಾನಾಪುರ ವಲಯದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ 3,905 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಖಾನಾಪುರ-ಜಾಂಬೋಟಿ ಹೆದ್ದಾರಿಯಲ್ಲಿ ಅಕ್ರಮವಾಗಿ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ 67,73,120 ರೂ.ಮೌಲ್ಯದ 180 ಎಂಎಲ್‌ನ 21,696 ಬ್ಲೂೃ ವಿಸ್ಕಿ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಬಕಾರಿ ಅಪರ ಆಯುಕ್ತ (ಅಪರಾಧ) ಡಾ.ವೈ.ಮಂಜುನಾಥ, ಅಂಬಕಾರಿ ಜಂಟಿ ಆಯುಕ್ತ ಪಿರೋಜ್‌ಖಾನ್ ಖಿಲ್ಲೆದಾರ, ಅಬಕಾರಿ ಉಪ ಅಧೀಕ್ಷಕ ರವಿ.ಎಂ.ಮುರಗೋಡ ಮಾರ್ಗದರ್ಶನದಲ್ಲಿ ಖಾನಾಪುರ ವಲಯದ ಅಬಕಾರಿ ನಿರೀಕ್ಷಕ ದಾವಲಸಾಬ ಶಿಂದೋಗಿ, ಉಪ ನಿರೀಕ್ಷಕ ಜಯರಾಮ ಜಿ.ಹೆಗಡೆ, ಸಿಬ್ಬಂದಿ ಮಂಜುನಾಥ ಬಳಗಪ್ಪನವರ, ಪ್ರಕಾಶ ಡೋಣಿ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net