

ಕಳಸ: ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 39.22 ಕೋಟಿ ರೂ. ವಹಿವಾಟು ನಡೆಸಿದೆ ಎಂದು ಅಧ್ಯಕ್ಷ ಎಂ.ಸಿ.ಸಂತೋಷ್ ಹೇಳಿದರು.
2023-24ನೇ ಸಾಲಿನ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, 96.46 ಲಕ್ಷ ಷೇರು ಬಂಡವಾಳ ಹೊಂದಿದ್ದು, ಸುಮಾರು 1.41 ಕೋಟಿ ಠೇವಣಿ ಹೊಂದಿದೆ. ಡಿಸಿಸಿ ಬ್ಯಾಂಕಿನಿಂದ 602.83 ಕೋಟಿ ಕೆಸಿಸಿ ಬೆಳೆಸಾಲ ನೀಡಿದ್ದು, ಸ್ವಂತ ಬಂಡವಾಳದಲ್ಲಿ 16.14 ಕೋಟಿ ವಿವಿಧ ಸಾಲಗಳನ್ನು ನೀಡಿದೆ. 2023-24ನೇ ಸಾಲಿಗೆ ಸುಮಾರು 9.18 ಲಕ್ಷ ಲಾಭ ಗಳಿಸಿದೆ ಎಂದರು.
ನಿರ್ದೇಶಕ ಎಂ.ಪಿ.ಗಿರೀಶ್ ಮಾತನಾಡಿ, ಸುಮಾರು 2 ಕೋಟಿ ವೆಚ್ಚದಲ್ಲಿ ವಿವಿಧ ಉದ್ದೇಶದ ಗೋದಾಮು ಹಾಗೂ ಮಳಿಗೆ ಇತ್ಯಾದಿಗಳನ್ನು ನಿರ್ಮಿಸಿ ವ್ಯಾಪಾರ ಪ್ರಾರಂಭಿಸಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಗೋವರ್ಧನ್, ನಿರ್ದೇಶಕರಾದ ಎಂ.ಪಿ.ಗಿರೀಶ್, ಎಚ್.ಆರ್.ಮಹೇಶ್, ಬಿ.ಪಿ.ಬೋಜರಾಜ್, ಕೆ.ಟಿ.ವೃಂದಾವತಿ, ಪುರುಷೋತ್ತಮ್, ಸುಲೋಚನಾ, ಪ್ರೆಸ್ಸಿಲ್ಲಾ ಸಾಲ್ತಾನಾ, ನಾಗೇಶ್ ರವೀಂದ್ರ ಭಟ್, ಹರೀಶ್ ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಯಾಗ್, ಸಿಇಒ ಸತೀಶ್ ಇದ್ದರು.