ಕನ್ನಡ ಪರೀಕ್ಷೆಗೆ 38 ವಿದ್ಯಾರ್ಥಿಗಳು ಗೈರು

1 skpp 4
Published on

ಸಕಲೇಶಪುರ: ತಾಲೂಕಿನಲ್ಲಿ ಶುಕ್ರವಾರ ಆರಂಭವಾದ ದ್ವಿತೀಯ ಪಿಯು ಕನ್ನಡ ಭಾಷಾ ಪರೀಕ್ಷೆಗೆ 38 ವಿದ್ಯಾರ್ಥಿಗಳು ಗೈರಾಗಿದ್ದರು.


ತಾಲೂಕಿನಲ್ಲಿ ಒಟ್ಟು 10 ಪದವಿಪೂರ್ವ ಕಾಲೇಜುಗಳಲ್ಲಿ ಚಂಗಡಿಹಳ್ಳಿ ಹಾಗೂ ಯಸಳೂರು ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ಶನಿವಾರಸಂತೆಯಲ್ಲಿ ಪರೀಕ್ಷೆ ಎದುರಿಸಿದರೆ, ಉಳಿದ 8 ಕಾಲೇಜಿನ 530 ವಿದ್ಯಾರ್ಥಿಗಳು ಪಟ್ಟಣದ ಯಂಗ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದರು. ಮೊದಲ ದಿನದ ಕನ್ನಡ ಭಾಷಾ ಪರೀಕ್ಷೆಗೆ 448 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ, 38 ವಿದ್ಯಾರ್ಥಿಗಳು ಗೈರಾಗಿದ್ದು 410 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದರು. ಉಳಿದಂತೆ ತಾಲೂಕಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net