371(ಜೆ)ಗೆ ವಿರೋಧ ಖಂಡನೀಯ

Dr Ajaysing
Published on

ಕಲಬುರಗಿ: ಸಂವಿಧಾನದ ೩೭೧ (ಜೆ) ಕಲಂ ವಿರೋಧಿಸಿ ಬೆಂಗಳೂರು ಮೂಲದ ಕೆಲ ಸಂಘಟನೆಗಳು, ಬುದ್ಧಿ ಜೀವಿಗಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಕಲ್ಯಾಣ ಕರ್ನಾಟಕದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ತಿಳಿಸಿದ್ದಾರೆ. ಹಸಿರು ಪ್ರತಿಷ್ಠಾನದವರು ಹೇಳಿಕೆ, ಹೋರಾಟ ಮಾಡಿ ಈ ಭಾಗದ ಭಾವನೆಗಳನ್ನು ಕೆಣಕಬಾರದು. ಮೊದಲು ಪ್ರಾದೇಶಿಕ ಅಸಮಾನತೆ, ನೋವು, ಯಾತನೆ ಅರಿಯಲಿ. ೩೭೧ (ಜೆ) ನಮ್ಮ ಸಂವಿಧಾನ ಬದ್ಧ ಹಕ್ಕಾಗಿದೆ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಪಡೆಯುತ್ತಿದ್ದಾರೆ ಎಂಬುದು ಶುದ್ಧ ತಪ್ಪು. ಈ ಬಗ್ಗೆ ಸಿಎಂ, ಡಿಸಿಎಂ ಗಮನಕ್ಕೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನದ ೩೭೧ (ಜೆ) ಕಲಂ ಜಾರಿಗೆ ಆಗಿದೆ. ಮಾಹಿತಿ ಇಲ್ಲದೆ ಅಪ್ರಪ್ರಚಾರ ಸರಿಯಲ್ಲ. ಈ ಭಾಗ ಹಿಂದುಳಿದ ಬಗ್ಗೆ ಸತ್ಯಶೋಧನಾ ಸಮಿತಿ, ಧರ್ಮಸಿಂಗ್ ಸಮಿತಿ, ನಂಜುAಡಪ್ಪ ವರದಿ ಉಲ್ಲೇಖಿಸಿವೆ. ವಿಶಾಲ ಕರ್ನಾಟಕದಲ್ಲಿ ಉದ್ಯೋಗ, ಶೈಕ್ಷಣಿಕ, ಅಭಿವೃದ್ಧಿಯಿಂದ ವಂಚಿತರಾದಾಗ ಕ್ಯಾರೆ ಎನ್ನದ ಶಕ್ತಿಗಳು ಇಂದು ನಮ್ಮ ಪಾಲಿನ ಹಕ್ಕು ಕೀಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಕುಹಕಿಗಳು ತಮ್ಮ ನಿಲುವು ಕೈಬಿಡಬೇಕು, ಹೋರಾಟದಿಂದ ಹಿಂದೆ ಸರಿದಿ ಈ ಭಾಗದ ಜನರ ಬವಣೆಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net