೩೭೧ ಜೆ ದಶಮಾನೋತ್ಸವ ಮತ್ತು ೯೩೬ ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಕರ‍್ಯಕ್ರಮ * ೩೭೧(ಜೆ) ಜಾರಿಯಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ- ಶಿವರಾಜ ತಂಗಡಗಿ

raichur
raichur
Published on

 ರಾಯಚೂರು ೩೭೧(ಜೆ) ಜಾರಿಗೊಂಡಿರುವ ಫಲವಾಗಿ ೮೯೫೬ ವೈಧ್ಯಕೀಯ ಸೀಟುಗಳು, ೨೫,೬೭೯ ಇಂಜಿನಿಯರಿಂಗ್, ೧೯೨೫ ದಂತ ವೈದ್ಯಕೀಯ ಸೀಟುಗಳು ಈ ಭಾಗದ ವಿದ್ಯರ‍್ಥಿಗಳಿಗೆ ದೊರೆತಿದೆಂದು ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಯರಗೇರಾ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಬುಡಕಟ್ಟು ಸಾಂಸ್ಕೃತಿಕ ಉತ್ಸವ, ಆದಿಕವಿ ಮರ‍್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಹಾಗೂ ೩೭೧ ಜೆ ದಶಮಾನೋತ್ಸವ ಮತ್ತು ೯೩೬ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಕರ‍್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಮಾಜಿ ಮುಖ್ಯಮಂತ್ರಿಯೊಬ್ಬರು ಇತ್ತೀಚಿಗೆ ಈ ಭಾಗಕ್ಕೆ ಮಲ್ಲಿಕರ‍್ಜುನ ರ‍್ಗೆಯವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಅವರಿಗೆ ಮಾಹಿತಿ ಕೊರತೆಯಿದೆ. ಮಾಹಿತಿ ಪಡೆದು ಮಾತನಾಡಬೇಕು. ಮಲ್ಲಿಕರ‍್ಜುನ ರ‍್ಗೆಯವರ ಶ್ರಮದ ಫಲವಾಗಿ ಈ ಭಾಗದ ಅಭಿವೃದ್ದಿಗೆ ನಾಂದಿ ಹಾಡಲಾಗಿದೆ ೩೭೧(ಜೆ) ಜಾರಿಗೊಂಡಿರುವ ಫಲವಾಗಿ ೮೯೫೬ ವೈದ್ಯಕೀಯ ಸೀಟುಗಳು, ೨೫,೬೭೯ ಇಂಜಿನಿಯರಿಂಗ್, ೧೯೨೫ ದಂತ ವೈಧ್ಯಕೀಯ ಸೀಟುಗಳು ಈ ಭಾಗದ ವಿದ್ಯರ‍್ಥಿಗಳಿಗೆ ದೊರೆತಿದೆ.

ಬಿಜೆಪಿಯವರು ಕೇವಲ ಮಾತನಾಡುತ್ತಾರೆ. ಹೊರತು ಕೆಲಸ ಮಾಡುವದಿಲ್ಲ. ಸಿದ್ದರಾಮಯ್ಯ ರ‍್ಕಾರದಿಂದ ಕಲ್ಯಾಣ ರ‍್ನಾಟಕ ಅಭಿವೃದ್ದಿ ಮಂಡಳಿಗೆ ೫ ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ, ಬಿ.ಎಸ.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖ್ಯಮಂತ್ರಿಗಳಾಗಿದ್ದಾಗ ಎಷ್ಟು ಹಣ ಕೊಟ್ಟರು ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರ‍್ನಾಟಕ ಮಾದರಿಯನ್ನೇ ಘೋಷಿಸಿದ್ದಾರೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಮಾತನಾಡಿ, ಕಲ್ಯಾಣ ರ‍್ನಾಟಕ ಅಭಿವೃದ್ದಿ ಮಂಡಳಿಯಿಂದ ೭ ಜಿಲ್ಲೆಗಳ ಅಭಿವೃದ್ದಿಗೆ ಕಾಂಗ್ರೆಸ್ ರ‍್ಕಾರ ಬದ್ದವಾಗಿದೆ. ಕಾಂಗ್ರೆಸ್ ರ‍್ಕಾರ ಅವಧಿಯಲ್ಲಿಯೇ ಜನಪರವಾದ ಯೋಜನೆಗಳು ಜಾರಿಗೊಂಡಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಗೆಯವರ ಶ್ರಮದ ಫಲವಾಗಿ ಯುಪಿಎ ರ‍್ಕಾರದ ಅವಧಿಯಲ್ಲಿ ೩೭೧(ಜೆ) ಜಾರಿಗೊಳಿಸಿದ್ದರು. ದಶಮಾನೋತ್ಸವ ಕರ‍್ಯಕ್ರಮದಲ್ಲಿ ನಾವಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಕೆಆರ್‌ಡಿಬಿಗೆ ಪ್ರತಿರ‍್ಷ ೫ ಸಾವಿರ ಕೋಟಿ ರೂ ಅನುದಾನ ನೀಡಿದ್ದಾರೆ. ಅಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಶೇ.೧೦೦ ರಷ್ಟು ಯಶಸ್ವಿಯಾಗಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಮಾತನಾಡಿ, ೩೭೧ ಜೆ ಕಾಯ್ದೆಯಿಂದ ಕಲ್ಯಾಣ ರ‍್ನಾಟಕ ಭಾಗದ ವಿದ್ಯರ‍್ಥಿಗಳಿಗೆ ಅನುಕೂಲವಾಗಿದೆ. ಇದರಿಂದ ೯ ಸಾವಿರ ವಿದ್ಯರ‍್ಥಿಗಳು ವೈದ್ಯಾರಾಗಿದ್ದಾರೆ. ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿದರೆ ಶೇ.೧೦೦ ರಷ್ಟು ಈ ಭಾಗದವರಿಗೆ ಮೀಸಲಾತಿಯಲ್ಲಿ ಉದ್ಯೋಗ ದೊರೆಯಲಿದೆ. ಶಿಕ್ಷಣ ಸೇರಿದಂತೆ ವಿವಿಧ ಅಭಿವೃದ್ದಿಗಾಗಿ ಕೆಕೆಆರ್‌ಡಿಬಿಯಿಂದ ಪ್ರತಿ ರ‍್ಷ ೫ ಸಾವಿರ ಕೋಟಿ ಕಲ್ಯಾಣ ರ‍್ನಾಟಕ ಭಾಗದ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗ್ರಾಮೀಣ ಭಾಗವನ್ನು ಸಂಪರ‍್ಣ ನೀರಾವರಿ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಇಗಾಗಲೇ ಗುಂಜಳ್ಳಿ ಕೆರೆ ತುಂಬುವ ಯೋಜನೆಗೆ ಶಂಕು ಸ್ಥಾಪನೆಯನ್ನು ಸಿಎಂ ಅವರು ಮಾಡಿದ್ದಾರೆ. ಶೀಘ್ರದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಹಾಗೂ ಗ್ರಾಮೀಣ ಭಾಗದಲ್ಲಿ ಒಂದು ತಾಲೂಕು ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂರ‍್ಭದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಗೆ,ಸಚಿವರಾದ ಸತೀಶ್, ಜಾರಕಿಹೋಳಿ,ಡಾ.ಎಚ್.ಸಿ ಮಾಹದೇವಪ್ಪ, ಡಾ.ಸುಧಾಕರ್,ಎನ್.ಎಸ್.ಬೋಸರಾಜು, ಶರಣಪ್ಪ ರ‍್ಶನಾಪುರು, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಶಾಸಕ ಹಂಪಯ್ಯ ಸಾಹುಕಾರ ಬಸನಗೌಡ ದದ್ದಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net