

ಕಲಬುರಗಿ: ಬೆಂಗಳೂರಿನಲ್ಲಿ ಜೂ.೧ರಂದು ೩೭೧ (ಜೆ) ಕಲಂನಿAದ ರಾಜ್ಯದ ೨೪ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳಿ, ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ, ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ನಡಗೇರಿ ಆಗ್ರಹಿಸಿದರು.
ಸತತ ಹೋರಾಟದಿಂದ ಪಡೆದುಕೊಂಡಿರುವ ೩೭೧ (ಜೆ) ಕಲಂನ ಫಲವನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಮೈಸೂರು ಕರ್ನಾಟಕಕ್ಕೆ ಅನ್ಯಾಯವಾದರೆ ಈ ಭಾಗದವರು ಹೋರಾಟ ಮಾಡುತ್ತೇವೆ. ಆದರೆ ಈ ಭಾಗಕ್ಕೆ ದೊರೆತಿರುವ ಅವಕಾಶವನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಸರ್ಕಾರ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರೆ, ಈ ಭಾಗದ ಜನತೆಯ ಭಾವನೆಗೆ ಧಕ್ಕೆಯಾಗಲಿದೆ. ೩೭೧ (ಜೆ) ವಿರೋಧಿಸುವ ಮೂಲಕ ಕರ್ನಾಟಕ ಇಬ್ಬಾಗ ಮಾಡಲು ಸಂಚು ರೂಪಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಸಿರು ಪ್ರತಿಷ್ಠಾನ ಬೆಂಗಳೂರು ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
೩೭೧ (ಜೆ) ಉಪ ಸಮಿತಿಯ ಅಧ್ಯP್ಷÀರು ಮತ್ತು ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆರವರು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಬಾಬು ಮದನಕರ, ಸಂಘಟಕ ಜೈಭೀಮ ಆಲಗೂಡ, ಮೋಹನ ಸಾಗರ, ಪ್ರವೀಣ ಖೇಮನ, ನಾಗು ಡೊಂಗರಗಾAವ, ಅರುಣ ಇನಾಮದಾರ ಇತರರಿದ್ದರು.