37 ಸೀಶಕ್ತಿ ಸಂಘಕ್ಕೆ ಸಾಲ ವಿತರಣೆ

WhatsApp Image 2020-07-04 at 13.55.28 (1)
Published on

ಗೌರಿಬಿದನೂರು : ತಾಲೂಕಿನ ಡಿಸಿಸಿ ಬ್ಯಾಂಕ್ ವಿಎಸ್‌ಎಸ್‌ಎನ್ ಕಲ್ಲೂಡಿ ಸೊಸೈಟಿ ಮುಖಾಂತರ ಸುಮಾರು 37 ಸ್ತ್ರೀಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂನಂತೆ 1.85 ಕೋಟಿ ರೂಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಲಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ನಗರದ ಹೊರವಲಯದ ಕಲ್ಲೂಡಿ ವಿಎಸ್‌ಎಸ್‌ಎನ್ ಸೊಸೈಟಿಯಿಂದ ಶನಿವಾರ ಸಾಲ ವಿತರಿಸಿ ಮಾತನಾಡಿ,

ತಾಲೂಕಿನಾದ್ಯಂತ ಸುಮಾರು 2500 ಸ್ತ್ರೀಶಕ್ತಿ ಸಂಘಗಳಿದ್ದು, ಇವುಗಳಲ್ಲಿ 1 ಲಕ್ಷ ಹೆಣ್ಣುಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಕೆಲವು ಸಂಘಗಳಿಗೆ ಸಾಲ ವಿತರಣೆ ಮಾಡಲಾಗಿದೆ ಎಂದರು.

ತಾಲೂಕಿಗೆ ಇನ್ನು 3 ತಿಂಗಳಲ್ಲಿ ಕಿಂಡಿ ಆಣೆಕಟ್ಟು ಮೂಲಕ ಎಚ್.ಎನ್.ವ್ಯಾಲಿ ನೀರು ಹರಿಯಲಿದ್ದು ನೀರಿನ ಸಮಸ್ಯೆ ನೀಗಿಸಲಾಗುವುದು. ಗೌರಿಬಿದನೂರು ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಪಟ್ಟಣದ ಆಸುಪಾಸಿನ ಗ್ರಾಮಗಳಾದ ಗುಂಡಾಪುರ, ಪ್ರಶಾಂತನಗರ, ಕಲ್ಲೂಡಿ, ಹಿರೇಬಿದನೂರು, ವೀರ‌್ಲಗೊಲ್ಲಹಳ್ಳಿ ಇವುಗಳನ್ನು ಸೇರ್ಪಡಿಸಿ ಆಸ್ತಿಯನ್ನು ದುಪ್ಪಟ್ಟು ಬೆಲೆ ಬರುವಂತೆ ಮಾಡಲಾಗಿದೆ ಎಂದು ತಿಳಿಸಿದರು.ನಿರ್ದೇಶಕರಾದ ವೆಂಕಟಾಚಲಪತಿ, ವೆಂಕಟೇಗೌಡ, ಕಲ್ಲೂಡಿ ನಂಜುಂಡಗೌಡ, ವಿಎಸ್‌ಎಸ್‌ಎನ್ ಕಾರ್ಯದರ್ಶಿ ರಂಗನಾಥಗೌಡ, ರಾಮಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net