

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಸೆ.23ರಿಂದ 25ರವರೆಗೆ ನಡೆಯುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29 ಮಂದಿ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಒಂದೇ ಸಂಸ್ಥೆಯಿಂದ 29 ಕ್ರೀಡಾಪಟುಗಳು ಸ್ಪರ್ಧೆಗೆ ಅವಕಾಶ ಪಡೆದಿರುವುದು ಗಮನಾರ್ಹ ಸಾಧನೆ. 10 ಮಂದಿ ಬಾಲಕಿಯರು ಹಾಗೂ 19 ಮಂದಿ ಬಾಲಕರು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
ಬಾಲಕಿಯರ ವಿಭಾಗ:
ಐಶ್ವರ್ಯಾ(ಚಕ್ರ ಎಸೆತ, ಗುಂಡು ಎಸೆತ), ಗೀತಾ(400 ಮೀ., 4x400 ರಿಲೇ), ನಾಗಿನಿ(1000 ಮೀ.), ಚರಿಶ್ಮಾ(1000 ಮೀ.), ವೈಷ್ಣವಿ(ಉದ್ದ ಜಿಗಿತ), ಭಾಗೀರಥಿ(3 ಕಿ.ಮೀ ನಡಿಗೆ), ನಂದಾ(ಜಾವೆಲಿನ್ ಎಸೆತ), ಪ್ರೇಕ್ಷಿತಾ(ಜಾವೆಲಿನ್ ಎಸೆತ), ಮೇಘಾ(ಟ್ರಯಥ್ಲಾನ್ ಸಿ), ಸುಜಾತಾ ವೈ.(ಟ್ರಯಥ್ಲಾನ್ ಸಿ).
ಬಾಲಕರ ವಿಭಾಗ:
ನೋಯಿಲ್(ಉದ್ದ ಜಿಗಿತ), ಮಹಮ್ಮದ್ ತಬ್ಶೀರ್(ತ್ರಿವಿಧ ಜಿಗಿತ), ಗುರು(ಹೆಪ್ಟಾಥ್ಲಾನ್), ಯಶವಂತ(800 ಮೀ., 4x400 ರಿಲೇ), ದಯಾನಂದ(400 ಮೀ., 4x400 ರಿಲೇ), ದರ್ಶನ(5 ಕಿ.ಮೀ ನಡಿಗೆ), ರಾಮು(400 ಮೀ., 4x400 ರಿಲೇ), ಸರ್ವಜಿತ್(4x100 ರಿಲೇ), ಅಬ್ದುಲ್ ರಜಾಕ್(ಹ್ಯಾಮರ್ ಎಸೆತ), ಕೇಶವ ನಾಯ್ಕ(ಜಾವೆಲಿನ್ ಎಸೆತ), ಮನಿಷ್(ಉದ್ದ ಜಿಗಿತ), ಡೈನ್ದೇವ್(800 ಮೀ. ಹರ್ಡಲ್ಸ್), ಲೋಹಿತ್ ಗೌಡ(ಉದ್ದ ಜಿಗಿತ), ನವೀನ್(ಉದ್ದ ಜಿಗಿತ), ಕೃಷ್ಣ ಪ್ರಕಾಶ(ಜಾವೆಲಿನ್ ಎಸೆತ), ಮೈಲಾರಿ(ಜಾವೆಲಿನ್ ಎಸೆತ), ಪ್ರಣವ್(ಟ್ರಯಥ್ಲಾನ್ ಎ), ಆದರ್ಶ್(ಟ್ರಯಥ್ಲಾನ್ ಬಿ), ಸುಭಾಶ್(ಟ್ರಯಥ್ಲಾನ್ ಸಿ). ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.