ವಿಮೆ ಪಾವತಿಸದ 36 ದ್ವಿಚಕ್ರ ವಾಹನ ವಶಕ್ಕೆ

26 nrp 3...
Published on

ಎನ್.ಆರ್.ಪುರ: ವಾಹನ ಸವಾರರ ಜೀವ ರಕ್ಷಣೆಗಾಗಿ ಪೊಲೀಸ್ ಇಲಾಖೆ ಕೆಲವು ನಿಯಮಗಳನ್ನು ಹಾಕುತ್ತದೆ ಎಂದು ಪಿಎಸ್‌ಐ ಬಿ.ಎಸ್.ನಿರಂಜನ್‌ಗೌಡ ಹೇಳಿದರು.

ಪ್ರವಾಸಿ ಮಂದಿರ ಸಮೀಪ ಸಂಜೆ ವಾಹನ ದಾಖಲೆಗಳ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮುಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಒಂದೇ ದಿನ, ಒಂದೇ ಗಂಟೆಯಲ್ಲಿ ವಿಮೆ ಪಾವತಿಸ 36 ದ್ವಿಚಕ್ರ ವಾಹನಗಳ ಪತ್ತೆ ಮಾಡಿದ್ದು, ಇವುಗಳನ್ನು ವಶಕ್ಕೆ ಪಡೆಯಲಾಗುವುದು. ವಿಮೆ ಪಾವತಿಸಿದ ರಶೀದಿಯನ್ನು ಠಾಣೆಗೆ ಬಂದು ತೋರಿಸಿದರೆ ಮಾತ್ರ ವಾಹನವನ್ನು ಬಿಡಲಾಗುವುದು. ಇದು ಮೊದಲ ಬಾರಿ ಎಂದು ರಿಯಾಯಿತಿ ನೀಡಲಾಗುತ್ತಿದೆ. ವಾಹನ ಸವಾರರ ಜೀವದ ರಕ್ಷಣೆಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಎಂದಿಗೂ ವಾಹನ ಸವಾರರು ತಪ್ಪು ಭಾವಿಸಬಾರದು.

ನಿಮ್ಮೆಲ್ಲರ ಜೀವ ನಮಗೆ ಅತ್ಯಮೂಲ್ಯ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ವಾಹನಗಳ ವಿಮೆ ಕಟ್ಟಬೇಕು. ಅಪ್ರಾಪ್ತರಿಗೆ ಎಂದಿಗೂ ವಾಹನ ಚಾಲನೆಗೆ ಅವಕಾಶ ಕೊಡಬಾರದು. ವಿಮೆ ಇಲ್ಲದೆ ವಾಹನಗಳು ಅಪಘಾತವಾದಾಗ ಇಬ್ಬರಿಗೂ ಪರಿಹಾರ ದೊರಕುವುದಿಲ್ಲ. ಕಡ್ಡಾವಾಗಿ ಎಲ್ಲರೂ ವಾಹನಗಳ ವಿಮೆ ಕಟ್ಟಬೇಕು. ಕೆಲ ಕಾಲನಿಗಳಲ್ಲಿ ಯಾವ ವಾಹನಗಳಿಗೂ ವಿಮೆ ಇಲ್ಲದಿರುವುದು ತಿಳಿದಿದೆ. ಎಲ್ಲರಿಗೂ ವಿಮೆ ಪಾವತಿ, ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎ.ಎಸ್ಸೈ ನಟರಾಜ್, ನಾಗರಾಜ್, ಸಿಬ್ಬಂಧಿಗಳಾದ ,ಬಿನು, ಕೌಶಿಕ್, ಹನುಮಂತು,ಮಧು,ಸ್ವರೂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net