

ನಾಪೋಕ್ಲು: ಇಲ್ಲಿಗೆ ಸಮೀಪದ ಚೆಟ್ಟಿ ಮಾನಿಯ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಶಾಲಿನ್ ಕುಂಫು ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕರಾಟೆ ಪರೀಕ್ಷೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿ ವಿವಿಧ ಬೆಲ್ಟ್‌ಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷಾ ಪರಿವೀಕ್ಷಕರಾಗಿ ಭಾರತ ಮುಖ್ಯ ತರಬೇತುದಾರರಾದ ಇಂದ್ರಜಿತ್, ವೇಣುಗೋಪಾಲ್, ದೇವರಾಜ, ಶಾಲಾ ತರಬೇತುದಾರರಾದ ನಾಟೋಳಂಡ ನಂಜುಂಡ ಕರ್ತವ್ಯ ನಿರ್ವಹಿಸಿದರು.
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಆರ್.ಯೋಗೇಶ್, ಮುಖ್ಯಶಿಕ್ಷಕರು ಬಹುಮಾನ ವಿತರಿಸಿದರು.