15ನೇ ಹಣಕಾಸಿನಲ್ಲಿ 36 ಲಕ್ಷ ಜಮೆ

mdvl
Published on

ಮಡಿವಾಳ: ಸಮೀಪದ ತೋರ್ನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ 2024-&25ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯಿತಿಯಲ್ಲಿ 2024-&25ನೇ ಸಾಲಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ರ್ಖಚಾಗಿರುವ ಮೊತ್ತ, ಸಿಬ್ಬಂದಿಯ ವಿವರ ಹಾಗೂ ವಾರ್ಷಿಕ ಲೆಕ್ಕಪತ್ರಗಳನ್ನು ಪಿಡಿಒ ಚಂಗಲರಾಯಗೌಡ ಮಂಡಿಸಿದರು.

15ನೇ ಹಣಕಾಸಿನಲ್ಲಿ 36 ಲಕ್ಷ ರೂ., ಗ್ರಾಪಂ ಸ್ವಂತ ಸಂಪನ್ಮೂಲ 67 ಲಕ್ಷ ರೂ. ಜಮೆ ಆಗಿದೆ. ಸ್ವಂತ ಸಂಪನ್ಮೂಲದಲ್ಲಿ 54 ಲಕ್ಷ ರೂ. ಅಭಿವೃದ್ಧಿ ಚಟುವಟಿಕೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net