36 ಬಾಲಕಾರ್ಮಿಕರ ರಕ್ಷಣೆ
ದೇವದುರ್ಗ: ಪಟ್ಟಣದ ಸಿರವಾರ ಕ್ರಾಸ್‌ನಲ್ಲಿ ಆಟೋ, ಟಂಟಂನಲ್ಲಿ ಕೂಲಿಕೆಲಸಕ್ಕೆ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ 36ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿದ್ದು 6 ಗೂಡ್ಸ್ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ವಿವಿಧ ಗ್ರಾಮಗಳ 36 ಬಾಲಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಯಿತು. ವಾಹನ ಮಾಲಿಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಯಿತು. ದುಡಿಯುವ ಮಕ್ಕಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1098ಗೆ ಮಾಹಿತಿ ನೀಡಲು ತಿಳಿಸಲಾಯಿತು.
ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ಟ್ರಾಫಿಕ್ ಪಿಎಸ್‌ಐ, ನಾರಾಯಣ, ಎ.ಎಸ್.ಐ ಗೋಪಾಲ, ಶಿಕ್ಷಣ ಇಲಾಖೆ ಇಸಿಒ ರಾಜನಗೌಡ, ಮಹಾದೇವಪ್ಪ, ಬಿಆರ್‌ಪಿ ಶರಣಪ್ಪ, ಸುರೇಶ, ಟಿ.ಎ.ಮನೋಹರ ಶಾಸ್ತ್ರಿ, ಸಿಆರ್‌ಪಿ ಮಹಾದೇವಪ್ಪ, ಬಾಬು ಹಡಗಲಿ, ಬಸವರಾಜ, ವೀರಭದ್ರಯ್ಯ, ವೆಂಕಟಾಂಜನೇಯ, ಅಂಬಣ್ಣ ಮದಾಳೆ ಇತರರಿದ್ದರು.ಬಾಲಕಾರ್ಮಿಕರ ರಕ್ಷಣೆ