36.08 ಲಕ್ಷ ರೂ. ಉಳಿತಾಯ ಬಜೆಟ್

25KUDLIGI1
Published on

ಕೂಡ್ಲಿಗಿ: ಸ್ಥಳೀಯ ಪಪಂನಲ್ಲಿ ಮಂಗಳವಾರ 36.08 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು. ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಬಜೆಟ್ ಮಂಡಿಸಿದರು.

ರಾಜಸ್ವ ಆದಾಯದಿಂದ 11.65 ಕೋಟಿ ರೂ., ಬಂಡವಾಳ ಆದಾಯದಿಂದ 5.39 ಕೋಟಿ ರೂ., ಅಸಾಮಾನ್ಯ ಆದಾಯದಿಂದ 9.78 ಕೋಟಿ ಸೇರಿದಂತೆ ಒಟ್ಟು 26.82 ಕೋಟಿ ರೂ. ಅದಾಯ ನಿರೀಕ್ಷಿಸಲಾಗಿದೆ. ಒಟ್ಟು 26.46 ಕೋಟಿ ರೂ. ವೆಚ್ಚ ಮಾಡುವ ಉದ್ದೇಶ ಹೊಂದಲಾಗಿದೆ. ಪಟ್ಟಣದ ಎಲ್ಲ ವಾರ್ಡುಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದು ಕಾವಲ್ಲಿ ಶಿವಪ್ಪ ನಾಯಕ ತಿಳಿಸಿದರು.

ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಪ್ರಭಾರ ಮುಖ್ಯಾಧಿಕಾರಿ ಎ.ನಸ್ರುಲ್ಲಾ, ಮುಖ್ಯ ಲೆಕ್ಕಾಧಿಕಾರಿ ಎಚ್.ವಿ.ಗುರುಮೂರ್ತಿ, ಕಿರಿಯ ಇಂಜಿನಿಯರ್ ಕೆ.ಗಿರೀಶ್, ಕಂದಾಯ ನಿರೀಕ್ಷಕ ರಾಘವೇಂದ್ರ, ಪ್ರಥಮ ದರ್ಜೆ ಸಹಾಯಕ ರಮೇಶ್, ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net