ರಾಘವೇಂದ್ರ ಗುರು ಸಾರ್ವಭೌಮರ 353ನೇ ಆರಾಧನ ಮಹೋತ್ಸವ: ಆ.18ರಿಂದ 22ರವರೆಗೆ ಧಾರ್ಮಿಕ ಕಾರ್ಯಕ್ರಮ

Shree guru raghavendra Swamiji
Published on

ಮಂಡ್ಯ: ನಗರದ ವ್ಯಾಸರಾಜ ಮಠ(ಸೋಸಲೆ)ದಲ್ಲಿ ಆ.18ರಿಂದ 22ರವರೆಗೆ ರಾಘವೇಂದ್ರ ಗುರು ಸಾರ್ವಭೌಮರ 353ನೇ ಆರಾಧನ ಮಹೋತ್ಸವ ಆಯೋಜಿಸಲಾಗಿದೆ.

18ರಂದು ಸಂಜೆ 6.30ಕ್ಕೆ ಲಕ್ಷ್ಮೀಪೂಜೆ, ಧ್ಯಾನಪೂಜೆ, 7ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ರವಿಕುಮಾರ್ ಗಣಿಗ ಮತ್ತು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ 6.30ಕ್ಕೆ ಪಂಚಾಮೃತ ಅಭಿಷೇಕ, ರಾತ್ರಿ 7.30ಕ್ಕೆ ಸರ್ವೋತ್ತಮ ಚಿಕ್ಕೇರೂರು ಅವರಿಂದ ದಾಸವಾಣಿ, 20ರಂದು ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ 7ಗಂಟೆಯಿಂದ ಧಾರ್ಮಿಕ ಕೈಂಕರ್ಯ, ರಾತ್ರಿ 7.30ಕ್ಕೆ ದೀಪಾ ಕಾಸರವಳ್ಳಿ ತಂಡದಿಂದ ದಾಸಾಮೃತ, 21ರಂದು ಮಧ್ಯಾರಾಧನೆ ಪ್ರಯುಕ್ತ ಧಾರ್ಮಿಕ ಪೂಜೆ, ರಾತ್ರಿ 7ಗಂಟೆಗೆ ವರಾಹ ಹರಿವಿಠಲ ದಾಸರಿಂದ ಪ್ರವಚನ, 22ರಂದು ಉತ್ತರರಾಧನೆ ಅಂಗವಾಗಿ ವಿಶೇಷ ಕಾರ್ಯಕ್ರಮ, ಬೆಳಗ್ಗೆ 11ಗಂಟೆಗೆ ಶ್ರೀಧರ್ ಚಿಂಚಿ ಅವರಿಂದ ಪ್ರವಚನ, ರಾತ್ರಿ 7.30ಕ್ಕೆ ಯಕ್ಷಗಾನ ಪ್ರಸಂಗ ವಾಲಿ ವಧೆ, ರಾತ್ರಿ 9ಗಂಟೆಗೆ ಮಹಾಮಂಗಳಾರತಿ ಹಾಗೂ 26ರಂದು ಶ್ರೀಕೃಷ್ಣ ಜನಾಷ್ಠಮಿ ಅಂಗವಾಗಿ ರಾತ್ರಿ 9ಗಂಟೆಗೆ ವಿಶೇಷ ಪೂಜಾಲಂಕಾರ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net