ಶ್ರೀ ರಾಘವೇಂದ್ರ ಸ್ವಾಮಿಗಳರ 352ನೇ ಮಧ್ಯಾರಾಧನೆ ಸಂಪನ್ನ

Untitled design (2)
ಗಂಗಾವತಿಯ ಶ್ರೀಸತ್ಯನಾರಾಯಣ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳರ 352ನೇ ಮಧ್ಯಾರಾಧನೆ ಮಹೋತ್ಸವ ನಿಮಿತ್ತ ರಥೋತ್ಸವ ಶುಕ್ರವಾರ ನಡೆಯಿತು.
Published on

ಗಂಗಾವತಿ: ನಗರದ ಶ್ರೀಸತ್ಯನಾರಾಯಣ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳರ 352ನೇ ಮಧ್ಯಾರಾಧನೆ ಮಹೋತ್ಸವ ನಿಮಿತ್ತ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.


ಪೇಜಾವರ ಅಧೋಕ್ಷಜ ಟ್ರಸ್ಟ್ ಮತ್ತು ಶ್ರೀ ಸತ್ಯನಾರಾಯಣ ದೇವಾಲಯ ಸಮಿತಿಯಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ,ರಥೋತ್ಸವ ನಡೆಯಿತು.

ಸತ್ಯನಾರಾಯಣ ಮೂರ್ತಿ, ವೃಂದಾವನವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ವಿಜಯಧ್ವಜ, ಸತ್ಯದೇವೇಶ, ರಾಮಚಂದ್ರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.

ಸಂಜೆ ನವವೃಂದಾವನ ಭಜನಾ ಮಂಡಳಿಯಿಂದ ಭಜನೆ, ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿ ಜರುಗಿತು.
ದೇವಾಲಯದ ಮುಖ್ಯಸ್ಥ ವಾದಿರಾಜಾಚಾರ್ ಕಲ್ಮಂಗಿ ಮಾತನಾಡಿದರು.

ಅರ್ಚಕ ಶ್ರೀಧರಾಚಾರ್ ರಾಜಪುರೋಹಿತ, ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಮುಖಂಡರಾದ ಪ್ರಹ್ಲಾದರಾವ್ ವೈದ್ಯ, ತಿರುಮಲರಾವ್, ದರೋಜಿ ಶ್ರೀರಂಗ ಶ್ರೇಷ್ಟಿ, ಮೇಗೂರು ರಾಘವೇಂದ್ರ, ದಾಸನಾಳ್ ಶ್ರೀನಿವಾಸ, ನರಸಿಂಗರಾವ್ ಕುಲ್ಕರ್ಣಿ, ಹನುಮಂತರಾವ್ ಇತರರಿದ್ದರು.


ರಾಯರ ಮಠ: ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ತೀರ್ಥರ ಮಧ್ಯಾರಾಧನೆ ನಿಮಿತ್ತ ವಿಶೇಷ ಪೂಜೆ ನಡೆಯಿತು.


ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಶ್ರೀವಿಜಯ ವಿಠ್ಠಲ ಮಹಿಳಾ ಭಜನಾ ಮಂಡಳಿಯಿಂದ ಹರಿಕಥಾಮೃತಸಾರ ಪಾರಾಯಣ, ಪಾದಪೂಜೆ, ಕನಕಾಭಿಷೇಕ ಅರ್ಚನೆ ಮತ್ತು ಹಸ್ತೋದಕ ನಡೆಯಿತು. ಮೃತ್ತಿಕಾ ವೃಂದಾವವನ್ನು ಬೆಳ್ಳಿ ಕವಚ, ಹೂವು ,ಹಣ್ಣುಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವ ಜರುಗಲಿದ್ದು, 8.50 ಲಕ್ಷ ರೂ. ವೆಚ್ಚದಲ್ಲಿ ಹೊಸ ರಥ ನಿರ್ಮಿಸಲಾಗಿದೆ.


ನಗರಸಭೆ ಸದಸ್ಯ ವಾಸುದೇವ ನವಲಿ, ವಿಚಾರಣಕರ್ತ ರಾಮಕೃಷ್ಣ ಜಹಾಗೀರದಾರ್,ಮುಖಂಡರಾದ ನಾಗರಾಜಾಚಾರ್ ಸರ್‌ಜೋಶಿ, ವೆಂಕೋಬರಾವ್ ಹೇರೂರು, ಸತ್ಯನಾರಾಯಣರಾವ್ ದೇಶಪಾಂಡೆ, ಅಪ್ಪಣ್ಣ, ಲಕ್ಷ್ಮೀಕಾಂತ ಹೇರೂರು, ನವಲಿ ಪ್ರಲ್ಹಾದರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net