35 ಜೂಜುಕೋರರ ಬಂಧನ

24 ald web
Published on

ಜಯಪುರ: ಹೋಮ್ ಸ್ಟೇನಲ್ಲಿ ಇಸ್ಟೀಟ್ ಜೂಜಾಡುತ್ತಿದ್ದ 35 ಮಂದಿಯನ್ನು ಕೊಪ್ಪ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿ 5.54 ಲಕ್ಷ ರೂಪಾಯಿ, 4 ಕಾರು ಮತ್ತು 39 ಮೊಬೈಲ್​ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಜನ್ಮದಿನಾಚರಣೆ ಪಾರ್ಟಿ ಹೆಸರಿನಲ್ಲಿ ಕುಂದಾಪುರ ಮೂಲದ ಮಹಮ್ಮದ್ ಹುಸೇನ್ ಹಾಗೂ ಉದಯ್ ಶೆಟ್ಟಿ ಎಂಬುವವರು ಹೋಂ ಸ್ಟೇನಲ್ಲಿ ನಾಲ್ಕು ಕೋಣೆಗಳನ್ನು ಬಾಡಿಗೆಗೆ ಪಡೆದು ಜೂಜಾಟದಲ್ಲಿ ತೊಡಗಿದ್ದರು. ಬಂಧಿತರು ಕೊಪ್ಪ, ಎನ್.ಆರ್.ಪುರ, ಶಿವಮೊಗ್ಗ, ಕುಂದಾಪುರ ಹಾಗೂ ಉಡುಪಿ ಜಿಲ್ಲೆಯವರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net