ಮಳೆಯಿ೦ದ 35 ಮನೆಗಳಿಗೆ ಹಾನಿ

WhatsApp Image 2024-06-10 at 3.57.31 PM
Published on

ಧಾರವಾಡ: ಪ್ರಸಕ್ತ ಮುಂಗಾರು ಆರಂಭವಾದಾಗಿನಿAದ ಈವರೆಗೆ ಜಿಲ್ಲೆಯಾದ್ಯಂತ ಮಳೆಯಿಂದ 35 ಮನೆಗಳಿಗೆ ಹಾನಿಯಾಗಿದೆ ಎಂದು ತಹಸೀಲ್ದಾರರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಜೂ. 1ರಿಂದ 9ರವರೆಗಿನ ವರದಿಯಲ್ಲಿ ಮಾನವ ಹಾಗೂ ಜಾನುವಾರು ಜೀವ ಹಾನಿಯಾಗಿಲ್ಲ. ನವಲಗುಂದ ತಾಲೂಕಿನಲ್ಲಿ 2 ಮನೆಗಳಿಗೆ ಭಾಗಶಃ ಹಾನಿ, 21 ಮನೆಗೆ ಅಲ್ಪಸ್ವಲ್ಪ ಹಾನಿ, ಧಾರವಾಡ ತಾಲೂಕಿನಲ್ಲಿ 7 ಮನೆಗೆ ಅಲ್ಪಸ್ವಲ್ಪ ಹಾನಿ, ಹುಬ್ಬಳ್ಳಿ ತಾಲೂಕಿನಲ್ಲಿ 3 ಮನೆಗೆ ಅಲ್ಪಸ್ವಲ್ಪ ಹಾನಿ, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 1 ಮನೆಗೆ ಅಲ್ಪಸ್ವಲ್ಪ ಹಾನಿ, ಕಲಘಟಗಿ ತಾಲೂಕಿನಲ್ಲಿ 1 ಮನೆಗೆ ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net