ಕಸಾಯಿಖಾನೆಗೆ ಸಾಗಿಸುತಿದ್ದ 35 ಜಾನುವಾರು ರಕ್ಷಣೆ

Untitled-4
1.ಜಾನುವಾರು ಅಕ್ರಮವಾಗಿ ಸಾಗಿಸುತಿದ್ದ ಲಾರಿ. 2.ಹೊಸಕೋಟೆ ನಗರದ ದೀನ ದಯಾಳ್​ ಗೋವಿನ ಆಶ್ರಮದಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ.
Published on

ಹೊಸಕೋಟೆ : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸಾರ್ವಜನಿಕರೇ ಜಡಿಗೇನಹಳ್ಳಿಯಲ್ಲಿ ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ತಡೆದು ಪೊಲೀಸರ ನೆರವಿನೊಂದಿಗೆ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಸಾರ್ವಜನಿಕರನ್ನು ಕಂಡ ಕೂಡಲೇ ಚಾಲಕ ಲಾರಿ ನಿಲ್ಲಿಸಿ ಮತ್ತೊಂದು ಬೆಂಗಾವಲು ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಕ್ರಮವಾಗಿ ದೇವನಹಳ್ಳಿಯಿಂದ ಹೊಸಕೋಟೆ ಮಾರ್ಗವಾಗಿ ಮಾಲೂರು ರಸ್ತೆಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 22 ಎಮ್ಮೆ, 8 ಕೋಣ, ಮೂರು ಎತ್ತು ಹಾಗೂ ಎಮ್ಮೆ ಕರುವನ್ನು ಸಾಗಿಸಲಾಗುತ್ತಿತ್ತು.

ಸಾರ್ವಜನಿಕರೊಬ್ಬರು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಅನುಮಾನದಲ್ಲಿ ಅಡ್ಡಗಟ್ಟಿದಾಗ ಲಾರಿಯನ್ನು ಚಾಲಕ ವೇಗವಾಗಿ ಚಲಾಯಿಸಿದ್ದು, ಕೂಡಲೇ 112ಗೆ ಕರೆ ಮಾಡಿ ದೂರು ನೀಡಲಾಯಿತು, ನಂತರ ಪೊಲೀಸರು ಲಾರಿ ವಶಪಡಿಸಿಕೊಂಡು ಕಾಲಿಗೆ ಹಗ್ಗ ಬಿಗಿದ ಸ್ಥಿತಿಯಲ್ಲಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡು ನಗರದ ದೀನದಯಾಳು ಗೋ ಆಶ್ರಮದಲ್ಲಿ ಆಶ್ರಯಕ್ಕೆ ಬಿಟ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net