ಉತ್ತೂರಿನ ಬಸಯ್ಯ ಅಜ್ಜನವರ 34ನೇ ಪುಣ್ಯಸ್ಮರಣೆ

34th death anniversary of Basaiah Ajjan of Uttur
Published on

ಮುಧೋಳ: ತಾಲೂಕಿನ ಉತ್ತೂರ ಗ್ರಾಮದ ಜಂಗಮ ಮೂರ್ತಿ, ತ್ರಿಕಾಲಜ್ಞಾನಿ ಲಿಂ.ಪರಮಪೂಜ್ಯ ಶ್ರೀಬಸಯ್ಯ ಅಜ್ಜನವರ 34ನೇ ಪುಣ್ಯಸ್ಮರಣೆ ಆ.25 ರಂದು ಹಮ್ಮಿಕೊಳ್ಳಲಾಗಿದೆ.ಮುಧೋಳ ವಿರಕ್ತಮಠ&ಗವಿಮಠದ ಬಸವಲಿಂಗ ಮಹಾಸ್ವಾಮೀಜಿ, ಯಾದವಾಡ ಚೌಕಿಮಠದ ಅಭಿನವ ಚೌಕೇಶ್ವರ ದೇವರು, ಉತ್ತೂರ ಹಿರೇಮಠದ ನೂರಂದಯ್ಯ, ಮುರಂದ್ರ ಹಾಗೂ ಶಾಂತವೀರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ 9 ಗಂಟೆಗೆ ಉತ್ತೂರ ಗ್ರಾಮದ ಶರಣ ಮಂಟಪದ ಹತ್ತಿರ ಹಾಯ್ದು ಹೋಗಿರುವ ಟಪ್ರಭಾ ನದಿಗೆ ಗಂಗಾ ಪೂಜೆ, ಬೆಳಗ್ಗೆ 10 ಗಂಟೆಗೆ ಬಸಯ್ಯ ಅಜ್ಜನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಆಗಮಿಸುವಂತೆ ಶಿವಶರಣ ಮಂಟಪ ಟ್ರಸ್ಟ್​ ಕಮಿಟಿಯವರು ತಿಳಿಸಿದ್ದಾರೆ.

ಉತ್ತೂರ ಗ್ರಾಮದ ಬಸಯ್ಯ ಅಜ್ಜನವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net