

ಕುಕನೂರು: ಶ್ರೀಗುರು ರಾಘವೇಂದ್ರ ಸ್ವಾಮಿಗಳಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತವೆ ಎಂದು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಸ್ ರವಿಕುಮಾರ ಹೇಳಿದರು.
ಪಟ್ಟಣದ ಶ್ರೀ ರಾಘವೇಂದ್ರ ದೇವಸ್ಥಾನದಲ್ಲಿ ಗುರುವಾರ ಶ್ರೀಗುರು ರಾಘವೇಂದ್ರ ರಾಯರ 349ನೇ ಉತ್ತರಾರಾಧನೆ ನಿಮಿತ್ತ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು. ಭಜಿಸಿದರೆ ರಾಘವೇಂದ್ರರು ಕಲ್ಪವೃಕ್ಷ, ನಮಿಸಿದರೆ ಕಾಮಧೇನು, ಪೂಜಿಸಿದರೆ ಸತ್ಯ, ಧರ್ಮದ ಮಾರ್ಗದರ್ಶಕರು ಎಂದರು. ರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಹಾಗೂ ಗುರುರಾಘವೇಂದ್ರ ರಾಯರ ಗೀತೆಗಳ ಪಾರಾಯಣ ಮಾಡಲಾಯಿತು.
ಪ್ರಮುಖರಾದ ಗಿರಿಧರ ಗ್ರಾಮಪುರೋಹಿತ, ಮಾಣಿಕರಾವ್ ಪಟವಾರಿ, ಎಸ್.ಎಚ್.ದೇಸಾಯಿ, ದತ್ತುರಾವ್ ಕುಲಕರ್ಣಿ, ರಾಘವೇಂದ್ರಾಚಾರ, ಬಿ.ಆರ್.ತಾಸೀನ್, ಗೋವಿನಂದರಾವ್, ಮುಕುಂದರಾವ್, ಎಚ್.ಕೆ.ಆಲೂರು, ವಾದಿರಾಜ ಹಾಗೂ ಭಕ್ತಾಧಿಗಳಿದ್ದರು.