

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜಿಲ್ಲೆಯಲ್ಲಿ ಶನಿವಾರ 19 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 342 ಕ್ಕೇರಿದೆ. 249 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 88 ಸಕ್ರಿಯ ಪ್ರಕರಣಗಳಿವೆ. ಐವರು ಮೃತಪಟ್ಟಿದ್ದು, 110 ನಿಯಂತ್ರಿತ ಪ್ರದೇಶಗಳಿವೆ.
ಕಟ್ಟೆಮಾಡು ಪರಂಬುಪೈಸಾರಿ ನಿವಾಸಿ 45 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಇವರು ಜ್ವರದಿಂದ ಬಳಲುತ್ತಿದ್ದರು. ಜ್ವರ ಲಕ್ಷಣ ಇದ್ದ ಎಮ್ಮೆಮಾಡು ಕೂರ್ಲಿ ಮಂಡಲ ನಿವಾಸಿ, 50 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ನಾಪೋಕ್ಲು ಬೇತು ರಸ್ತೆಯಲ್ಲಿರುವ ಪಿಎಂ ಎಸ್ ಕಾಂಪ್ಲೆಕ್ಸ್‌ನಲ್ಲಿರುವ ಕೇರಳ ಪ್ರಯಾಣ ಇತಿಹಾಸ ಹೊಂದಿರುವ 29 ವರ್ಷದ ಯುವಕನಿಗೆ ಸೋಂಕು ಖಚಿತವಾಗಿದೆ.
ಕುಶಾಲನಗರ ದಂಡಿನಪೇಟೆಯ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 29 ವರ್ಷದ ಯುವಕನಿಗೆ ಸೋಂಕು ಬಂದಿದೆ. ಜ್ವರ ಲಕ್ಷಣ ಹೊಂದಿದ್ದ ಸುಂಟಿಕೊಪ್ಪ 1ನೇ ಬ್ಲಾಕ್‌ನ 12 ವರ್ಷದ ಬಾಲಕಿಗೂ ಸೋಂಕು ಖಚಿತವಾಗಿದೆ. ವಿರಾಜಪೇಟೆಯ ಗಾಂಧಿನಗರದ 20 ವರ್ಷದ ಯುವಕನಿಗೆ ಸೋಂಕು ಬಂದಿದೆ. ಈತ ಜ್ವರದಿಂದ ಬಳಲುತ್ತಿದ್ದ.
ವಿರಾಜಪೇಟೆ ಅರ‌್ವತೋಕ್ಲುವಿನ 18 ವರ್ಷದ ಯುವತಿಗೆ ಸೋಂಕು ಬಂದಿದೆ. ಈ ಮೊದಲು ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಮಡಿಕೇರಿಯ ಹಿಲ್ ಡಾಲ್ ರೆಸಾರ್ಟ್ ಹಿಂಭಾಗದಲ್ಲಿ ನೆಲೆಸಿರುವ 46 ವರ್ಷದ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಂದಿದೆ.
ಬೆಂಗಳೂರು ಪ್ರಯಾಣ ಇತಿಹಾಸ ಹೊಂದಿರುವ ಕಡಗದಾಳಿನ 33 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಮಡಿಕೇರಿಯ ಕಾಲೇಜು ರಸ್ತೆಯಲ್ಲಿ ನೆಲೆಸಿರುವ 40 ಮತ್ತು 30 ವರ್ಷದ ಪುರುಷರಿಗೆ ಸೊಂಕು ದೃಢಪಟ್ಟಿದೆ. ಇವರು ಜ್ವರದಿಂದ ಬಳಲುತ್ತಿದ್ದರು. ಈ ಮೊದಲು ಸೋಂಕು ದೃಢಪಟ್ಟ ನೀರುಕೊಲ್ಲಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಸೋಂಕು ಖಚಿತವಾಗಿರುವ ಬೇತು ನಿವಾಸಿ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ವರ್ಷದ ಯುವಕನಿಗೆ ಸೋಂಕು ಖಚಿತವಾಗಿದೆ. ಮಡಿಕೇರಿಯ ಪ್ರಕೃತಿ ಬಡಾವಣೆಯಲ್ಲಿ ಜ್ವರದಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಬೆಟ್ಟೆಗೇರಿಯ ಈ ಮೊದಲು ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 51 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಕಾನ್ವೆಂಟ್ ರಸ್ತೆಯಲ್ಲಿ ಈ ಮೊದಲು ಸೋಂಕು ಖಚಿತವಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿಗೆ ಸೋಂಕು ಬಂದಿದೆ. ಮಹದೇವಪೇಟೆಯಲ್ಲಿ ನೆಲೆಸಿರುವ 28 ವರ್ಷದ ಆರೋಗ್ಯ ಕಾರ್ಯಕರ್ತನಿಗೂ ಸೋಂಕು ಬಂದಿದೆ.
ರ‌್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ತ್ವರಿತ ಕರೊನಾ ಪರೀಕ್ಷೆಗೆ ಚಾಲನೆ ನೀಡಲಾಗಿದೆ. ಗೋಣಿಕೊಪ್ಪ ಆರೋಗ್ಯ ವಸತಿ ನಿಲಯದಲ್ಲಿರುವ 50 ವರ್ಷದ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಪೊನ್ನಂಪೇಟೆ ರಸ್ತೆಯಲ್ಲಿರುವ ಪಿಎಚ್‌ಎಸ್ ಕಾಲನಿ ಕಾಫಿ ಬೋಡ್ ನಿವಾಸಿ, ಈ ಹಿಂದೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ವರ್ಷದ ಯುವತಿಗೆ ಸೋಂಕು ಬಂದಿದೆ.
13 ಪ್ರದೇಶ ಸೀಲ್ ಡೌನ್ :
ಜಿಲ್ಲೆಯಲ್ಲಿ ಹೊಸದಾಗಿ 13 ಪ್ರದೇಶ ಸೀಲ್ ಡೌನ್ ಮಾಡಲಾಗಿದೆ. ಕಟ್ಟೆಮಾಡು ಪರಂಬುಪೈಸಾರಿ, ಎಮ್ಮೆಮಾಡು ಕೂರ್ಲಿ ಮಂಡಲ, ಬೇತು ರಸ್ತೆಯಲ್ಲಿರುವ ಪಿಎಂಎಸ್ ಕಾಂಪ್ಲೆಕ್ಸ್, ವಿರಾಜಪೇಟೆ ಗಾಂಧಿನಗರ, ಮಡಿಕೇರಿಯ ಹಿಲ್ ಡಾಲ್ ರೆಸಾರ್ಟ್ ಹಿಂಭಾಗ, ಕಡಗದಾಳು, ಸುಂಟಿಕೊಪ್ಪ 1ಬ್ಲಾಕ್, ಗೋಣಿಕೊಪ್ಪ ಆರೋಗ್ಯ ವಸತಿಗೃಹ, ಮಡಿಕೇರಿಯ ಕಾಲೇಜು ರಸ್ತೆ, ಬೆಟ್ಟಗೇರಿ ಅಂಚೆ ಕಚೇರಿ ಹತ್ತಿರ, ಬೇತು ಮಕ್ಕಿ ದೇವಾಲಯ ರಸ್ತೆ, ಮಡಿಕೇರಿಯ ಪ್ರಕೃತಿ ಬಡಾವಣೆ, ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಸಮೀಪದ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯ 8 ಪ್ರದೇಶ ಸೀಲ್‌ಡೌನ್ ಮುಕ್ತಗೊಳಿಸಲಾಗಿದೆ. ಬೆಸೂರು ಕೊಡ್ಲಿಪೇಟೆ, ಮಡಿಕೇರಿಯ ಭಗವತಿನಗರ, ಗೋಣಿಕೊಪ್ಪದ ಎಂಎಂ ಬಡಾವಣೆ, ನೇತಾಜಿ ಬಡಾವಣೆ, ಕೆದಮುಳ್ಳೂರು, ಗುಡುಗಳಲೆ, ಕುಸುಬೂರು, ಮಡಿಕೇರಿ ಪೊಲೀಸ್ ವಸತಿಗೃಹ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.