ಕುಮಟಾದಲ್ಲಿ 34 ಸಾವಿರ ನೋಂದಣಿ

KUMTA
Published on

ಕುಮಟಾ: ಪಟ್ಟಣದ ಪುರಭವನದಲ್ಲಿ ಅಳವಡಿಸಲಾದ ಎಲ್‌ಇಡಿ ಪರದೆಯ ಮೇಲೆ ಬುಧವಾರ ಬೆಂಗಳೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿರುವ ನೇರಪ್ರಸಾರವನ್ನು ಪಟ್ಟಣ ವ್ಯಾಪ್ತಿಯ ಫಲಾನುಭವಿಗಳು ವೀಕ್ಷಿಸಿದರು.

ತಾಲೂಕಾಡಳಿತ, ಪುರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಪುರಭವನದಲ್ಲಿ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಸತೀಶ ಗೌಡ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಾಪಂ ಇಒ ನಾಗರತ್ನಾ ನಾಯಕ, ಪುರಸಭೆ ಸದಸ್ಯರು ಇನ್ನಿತರರು ಇದ್ದರು. ತಾ.ಪಂ. ಇಒ ನಾಗರತ್ನಾ ನಾಯಕ ಮಾತನಾಡಿ, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಕುಮಟಾದಲ್ಲಿ 39 ಸಾವಿರ ಫಲಾನುಭವಿಗಳ ನೋಂದಣಿಗೆ ಗುರಿ ಇತ್ತು. ಈವರೆಗೆ ಸುಮಾರು 34 ಸಾವಿರ ನೋಂದಣಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net