

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಗಾಂಜಾ ಮಾರುತ್ತಿದ್ದ ವೃದ್ಧನನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ, 330 ಗ್ರಾಂ ಗಾಂಜಾ, 1,500 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮೂಲತಃ ಲಕ್ಷ್ಮೇಶ್ವರದ ಇಲ್ಲಿನ ತಾರಿಹಾಳ ನಿವಾಸಿ, ಕೂಲಿ ಕಾರ್ಮಿಕ ಶಿವಪ್ಪ ಬಂಧಿತ. ಬಸ್ ನಿಲ್ದಾಣದೊಳಗೆ ಕ್ಯಾರಿ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಸಮೇತ ಬಂಧಿಸಿದ್ದಾರೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.