

ಕಡೂರು: ಹಿಂದುಳಿದ ಗ್ರಾಮಗಳ ಪ್ರಗತಿಗೆ ಶಾಸಕರು ಒತ್ತು ನೀಡುತ್ತಿದ್ದಾರೆ ಎಂದು ಕಾಮನಕೆರೆ ಗ್ರಾಪಂ ಅಧ್ಯಕ್ಷ ಶೇಖರ್ ತಿಳಿಸಿದರು.
ಕೆ.ದಾಸರಹಳ್ಳಿ ಗೇಟ್ ಬಳಿ ಬುಧವಾರ 33 ಲಕ್ಷ ರೂಪಾಯಿ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೆ.ದಾಸರಹಳ್ಳಿ ಜನರ ಬಹುದಿನಗಳ ಬೇಡಿಕೆ ಅನುಗುಣವಾಗಿ ಶಾಸಕ ಕೆ.ಎಸ್.ಆನಂದ್ ಅವರ ಪರಿಶ್ರಮದಿಂದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ಒದಗಿಸಿಕೊಟ್ಟಿದ್ದು, ಕೆ.ದಾಸರಹಳ್ಳಿಯಿಂದ ಕಾಮನಕೆರೆ ಮುಖ್ಯರಸ್ತೆಯವರೆಗೆ ಸಿಮೆಂಟ್ ರಸ್ತೆ ನಿರ್ಮಾಣವಾಗಲಿದೆ ಎಂದರು.
ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಹಿಂದುಳಿದ ಗ್ರಾಮಗಳ ಏಳಿಗೆಗೆ ಶಾಸಕರು ಹೆಚ್ಚಿನ ಒತ್ತುಕೊಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅವರದೇ ಆದ ಪರಿಕಲ್ಪನೆ ಮೂಲಕ ಶ್ರಮಿಸುತ್ತಿದ್ದಾರೆ. ನಗದಿಯಾತ್ ಕಾವಲ್‌ನಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಒತ್ತು ನೀಡಿ ಶೀಘ್ರದಲ್ಲೇ ಗಾರ್ಮೆಂಟ್ಸ್ ಆರಂಭವಾಗಲಿದೆ. ಇದರಿಂದ ಸಾವಿರಾರು ಯುವಜನರಿಗೆ ಉದ್ಯೋಗ ದೊರೆಯಲಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ವರಲಕ್ಷ್ಮೀ, ಮಾಜಿ ಅಧ್ಯಕ್ಷರಾದ ಕಂಸಾಗರ ಸೋಮಶೇಖರ್, ಮಮತಾ ಮಲ್ಲೇಶಪ್ಪ, ಸೌಭಾಗ್ಯಾ ಶಿವಣ್ಣ, ಮಲ್ಲೇ