

ಮಹಾಲಿಂಗಪುರ: ಪಟ್ಟಣದ ವಾಸವಿ ಕಟ್ಟಡದಲ್ಲಿರುವ ಚನ್ನಗಿರೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ 2021-22ನೇ ಸಾಲಿಗೆ 33.61 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಚನ್ನಯ್ಯ ಚಟ್ಟಿಮಠ ಹೇಳಿದರು.
ಶನಿವಾರ ಸಂಜೆ ಸಹಕಾರಿ ಸಭಾ ಭವನದಲ್ಲಿ ನಡೆದ ಸಹಕಾರಿಯ 11ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ 2181 ಸದಸ್ಯರಿದ್ದು, ಶೇರು ಬಂಡವಾಳ 73.72 ಲಕ್ಷ ರೂ. ಹೊಂದಿದೆ. 11.13 ಕೋಟಿ ರೂ. ಠೇವು ಇದ್ದರೆ, 11.48 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 12.78 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಶೇ 10 ರಷ್ಟು ಲಾಭಾಂಶ ಹಂಚಲಾಗಿದೆ ಎಂದರು.ಸಂಪೂರ್ಣ ಗಣಕೀಕೃತ, ಇ-ಸ್ಟ್ಯಾಂಪಿಂಗ್ ವ್ಯವಸ್ಥೆ, ಖುಷಿ ಮೈಕ್ರೋಸಾಲ, ವಾಹನ ಸಾಲ, ಮುದ್ದತ್ ಠೇವಣ ಸಾಲ, ಪಿಗ್ಮಿ ಸಾಲ, ಭೋಜಾ ಸಾಲ, ಮಹಿಳಾ ಅಭಿವೃದ್ಧಿ ಠೇವಣ , ಆರ್.ಡಿ. ವ್ಯವಸ್ಥೆ, ಉಳಿತಾಯ ಠೇವು, ಬಾಲ ಸುರಕ್ಷಾ ಠೇವು ಸೇರಿದಂತೆ ಇನ್ನಿತರ ಸೌಲಭ್ಯವನ್ನು ಸಹಕಾರಿ ಹೊಂದಿದೆ ಎಂದರು.
ಹಿಂದಿನ ಸಹಕಾರ ವರ್ಷದ ಲೆಕ್ಕ ಪರಿಶೋಧಕರ ವರದಿ, ಹಿಂದಿನ ಸಹಕಾರ ವರ್ಷದ ಹೆಚ್ಚುವರಿ ಅಥವಾ ನಿವ್ವಳ ಲಾಭದ ವಿಲೇವಾರಿ, ಮುಂದಿನ ಸಹಕಾರಿ ವರ್ಷದ ವಾರ್ಷಿಕ ಬಜೆಟ್‌ನ ಅನುಮೋದನೆ, ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ನಿರ್ದಿಷ್ಟ ಮೀಸಲು ಸೇರಿದಂತೆ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಬಾಡನವರ, ಸದಸ್ಯರಾದ ಪ್ರಕಾಶ ಭಾವಿಕಟ್ಟಿ, ರವಿ ಬಾರಕೋಲ, ಬಸವರಾಜ ಜಮಖಂಡಿ, ಮಹಾಂತೇಶ ಮನ್ನಯ್ಯನವರಮಠ, ಆನಂದ ಬೆಣಗಿ, ಮಹಾಲಿಂಗ ಕೊಣ್ಣೂರ, ಬಸವರಾಜ ಕಬ್ಬೂರ, ಸುಕನ್ಯಾ ಕಬ್ಬೂರ, ಮುಖ್ಯವ್ಯವಸ್ಥಾಪಕ ಮಹಾಲಿಂಗಯ್ಯ ಚಟ್ಟಿಮಠ, ಸಹ ವ್ಯವಸ್ಥಾಪಕ ಅಶೋಕ ಜಮಖಂಡಿ ಇತರರು ಇದ್ದರು.