

ಕಿಕ್ಕೇರಿ: ಹೋಬಳಿಯ ಪುಣ್ಯಕ್ಷೇತ್ರ ಸಾಸಲುವಿನ ಸೋಮೇಶ್ವರ, ಶಂಭುಲಿಂಗೇಶ್ವರ ಮುಜರಾಯಿ ದೇಗುಲದ ಹುಂಡಿಯಲ್ಲಿ ಕಾರ್ತಿಕ ಮಾಸದ ಕೊನೆಯ ವಾರ 10,69,975 ರೂ. ಸಂಗ್ರಹವಾಗಿದೆ.
ತಹಸೀಲ್ದಾರ್ ನಿಸರ್ಗಪ್ರಿಯಾ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆ ನಡೆಯಿತು. ಈ ಬಾರಿ ಕಾರ್ತಿಕ ಮಾಸದ ನಾಲ್ಕು ವಾರವೂ ಹುಂಡಿ ಎಣಿಕೆ ನಡೆಯಿತು. ನಾಲ್ಕು ವಾರಗಳಿಂದ ಒಟ್ಟು 33,62,505ರೂ. ಸಂಗ್ರಹವಾಗಿದೆ. ಬೆಳ್ಳಿಯ ನಾಗರ ಕವಚ, ಲಿಂಗದಕಾಯಿ ಸೇರಿದಂತೆ ವಿವಿಧ ರೀತಿಯ ಆಭರಣಗಳನ್ನು ಭಕ್ತರು ಅರ್ಪಿಸಿದ್ದಾರೆ. ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆಗೆ ಜಿಲ್ಲೆ, ಹೊರಜಿಲ್ಲೆಯಿಂದ ಭಕ್ತರು ಬರುತ್ತಾರೆ. ಬ್ಯಾಂಕ್ ಆಫ್ ಬರೋಡಾ ಸಾಸಲು ಗ್ರಾಮದ ಶಾಖೆಯಲ್ಲಿ ದೇಗುಲದ ಹೆಸರಿನಲ್ಲಿರುವ ಖಾತೆಗೆ ಹಣ ಜಮಾ ಮಾಡಲಾಯಿತು.
ಉಪತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನಾ, ಸೋಮಾಚಾರ್, ಕಾಂತೇಶ್, ಶಶಿಕುಮಾರ ಮಡ್ಡಿ, ಸುನೀಲ್ ಗಾಣಿಗೇರ, ಪರಿಮಳಾ, ವನಜಾಕ್ಷಿ, ತಿಪ್ಪೇಶ, ಗ್ರಾಮದ ಸಹಾಯಕರು ಇದ್ದರು.