33.64 ಲಕ್ಷ ರೂ.ಉಳಿತಾಯ ಬಜೆಟ್ ಮಂಡನೆ : ಮಧುಗಿರಿ ಪುರಸಭೆ ಅಧ್ಯಕ್ಷ ತಿಮ್ಮರಾಜು ಅಧ್ಯಕ್ಷತೆಯಲ್ಲಿ ಆಯವ್ಯಯ

30 MADHUGIRI 1
Published on

ಮಧುಗಿರಿ: ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಲಾಗಿದೆ. 2021-22ನೇ ಸಾಲಿನ ಆಯವ್ಯಯದಲ್ಲಿ 3.79 ಕೋಟಿ ರೂಪಾಯಿ ಜಮೆ ಆಗಲಿದ್ದು, 3.67ಕೋಟಿ ರೂಪಾಯಿ ಖರ್ಚಾಗಿ, 12.19 ಲಕ್ಷ ರೂಪಾಯಿ ಉಳಿಕೆಯಾಗಿ ಅಂದಾಜು 33.64 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಪುರಸಭೆ ಲೆಕ್ಕಿಗರಾದ ಸಲ್ಮಾ ಕೌಸರ್ ಮಂಡಿಸಿದರು.

ಪುರಸಭೆಯ 23 ವಾರ್ಡ್‌ಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಾಡಿಸುವಂತೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಶಾಸಕ ಎಂ.ವಿ.ವೀರಭದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಂ.ವಿ ವೀರಭದ್ರಯ್ಯ, ಎಸ್.ಇ.ಪಿ ಟಿಎಸ್ಪಿ ಯೋಜನೆಯಡಿ ಗರಿಷ್ಠ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಅಲ್ಲದೇ, ಪುರಸಭೆಗೆ ಮೂರು ಕೋಟಿ ರೂಪಾಯಿ ವಿಶೇಷ ಅನುದಾನ ಸರ್ಕಾರದಿಂದ ಬಿಡುಗಡೆಯಾಗಲಿದೆ ಎಂದರು.

ಪುರಸಭೆ ಮೇಲ್ದರ್ಜೆಗೇರಿಸೋಣ: ಪುರಸಭೆಯನ್ನು ಆಡಳಿತಾತ್ಮಕವಾಗಿ ನಗರಸಭೆಯನ್ನಾಗಿಸಲು ಎ್ಲರೂ ಪ್ರಯತ್ನಿಸೋಣ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. 2011ರ ಜನಗಣತಿ ಪ್ರಕಾರ ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 29 ಸಾವಿರ ಜನಸಂಖ್ಯೆಯಿದ್ದು, 50 ಸಾವಿರ ಜನಸಂಖ್ಯೆ ದಾಟಿದರಷ್ಟೇ ನಗರಸಭೆಯನ್ನಾಗಿಸಬಹುದು. ಇತ್ತೀಚೆಗೆ ನೆಲಮಂಗಲ ನಗರಸಭೆಯನ್ನಾಗಿ ಸರ್ಕಾರ ೋಷಿಸಿದೆ. ಈ ನಿಟ್ಟಿನಲ್ಲಿ ಪುರಸಭೆಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಸೇರ್ಪಡೆ ಮಾಡುವುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಚಿನಕವಜ್ರ, ಬಿಜವರ, ಸಿದ್ಧಾಪುರ ಗ್ರಾಪಂ ವ್ಯಾಪ್ತಿ ಸೇರ್ಪಡೆ ಮಾಡಿಕೊಂಡರೆ ನಗರಸಭೆಯನ್ನಾಗಿಸುವ ಮಾನದಂಡಗಳಿಗೆ ಅನುಕೂಲವಾಗಬಹುದು. ಅದಕ್ಕೆ ಗ್ರಾಪಂ ಆಡಳಿತ ಮಂಡಳಿ ಸರ್ಕಾರಕ್ಕೆ ಸೇರ್ಪಡೆ ಬಗ್ಗೆ ನಡಾವಳಿ ಮಾಡಬೇಕಾಗುತ್ತದೆ. ಇದು ಸಾಧ್ಯವೇ? 2021ರ ಜನಗಣತಿಯು ಪೂರಕ ಆಗೋದ್ಲಿ ಎಂದೆನಿಸುತ್ತದೆಂದು ಶಾಸಕರು ಅಭಿಪ್ರಾಯಪಟ್ಟರು.

5 ಕಿಮೀ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಿದರೆ ಕೃಷಿ ಭೂಮಿ ಹೆಚ್ಚಿರುವುದರಿಂದ ಇದು ಸಾಧ್ಯವ್ಲಿ, ಪಟ್ಟಣ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗದ ಹೊರತು ನಗರಸಭೆ ೋಷಣೆಗೆ ತಡವಾಗಲಿದೆ ಎಂದರು.

ಎತ್ತಿನಹೊಳೆ, ಹೇಮಾವತಿ, ಭದ್ರಾ ಮೇಲ್ದೃಂಡೆ ಯೋಜನೆಗಳ ಪೈಕಿ ತಾಲೂಕು ಭದ್ರಾ ಮೇಲ್ದೃಂಡೆ ಯೋಜನೆಯಿಂದ ಕೈ ಬಿಟ್ಟಿರುವುದರ ಬಗ್ಗೆ ತಿಳಿಯಲಾಗುತ್ತ್ಲಿ, ಭದ್ರಾ ಮೇಲ್ದೃಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿವರ್ತಿಸಲಾಗಿದೆ. ಇದರ ಉಪಯೋಗ ನೆರೆಯ ಶಿರಾ ಮತ್ತು ಪಾವಗಡ ತಾಲೂಕುಗಳು ಪಡೆಯುತ್ತಿದ್ದಾರೆ. ಈ ಯೋಜನೆ ತಾಲೂಕಿಗೆ ಲಭ್ಯವಾಗಿದ್ದರೆ ನೂರು ಕೆರೆಗಳಿಗೆ ನೀರಾಗುತ್ತಿತ್ತು. ಮಧುಗಿರಿ ಚಿತ್ರಣವೇ ಬದಲಾಗುತ್ತಿತ್ತು ಎಂದರು.

ಯೋಜನೆಗೆ ಮಧುಗಿರಿ ತಾಲೂಕನ್ನು ಸೇರ್ಪಡೆ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಸರ್ಕಾರದಿಂದ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದರು. ಪುರಸಭೆ ಸದಸ್ಯರಾದ ಎಂ.ಎಸ್ ಚಂದ್ರಶೇಖರ್, ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್.ಗಂಗರಾಜು, ಎಂ.ವಿ.ಗೋವಿಂದರಾಜು , ಲಾಲಾಪೇಟೆ ಮಂಜುನಾಥ್, ಹಸೀನಾ ಬಾನು, ಎಂ.ವಿ.ಮಂಜುನಾಥ್ ಆಚಾರ್, ಎನ್.ಬಿ.ಗಾಯತ್ರಿ, ಕೆ.ನಾರಾಯಣ್, ಜಿ.ಆರ್. ಸುಜಾತಾ, ಜಿ.ಎಸ್.ಶೋಭಾರಾಣಿ, ನಟರಾಜು, ನರಸಿಂಹಮೂರ್ತಿ, ನಸೀಮಾ ಬಾನು, ಪಾರ್ವತಮ್ಮ, ಬಿ.ಎಚ್.ನಾಗಲತಾ ಮತ್ತು ಷಾ ಹೀನಾ ಕೌಸರ್ ಇದ್ದರು.

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ಪುರಸಭೆಯ 85 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಂತಾಗಿದೆ. ಪುರಸಭೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂಬ ನೆಪಮೊಡ್ಡಿ ಕೈತೊಳೆದುಕೊಳ್ಳುತ್ತಿದೆ. ಪುರಸಭೆ ಆದಾಯ ಹೆಚ್ಚಿಸಲು ಕೆಲವು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಟ್ರೇಡ್ ಲೈಸೆನ್ಸ್, ಬಾರ್-ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಕಲ್ಯಾಣಮಂಟಪಗಳ ತೆರಿಗೆ ಹೆಚ್ಚಿಸಿ, ಸಂತೆ ಮೈದಾನದಲ್ಲಿ ಶೌಚಗೃಹ, ಕುಡಿಯುವ ನೀರು ಮತ್ತು ವಿದ್ಯುತ್ ಬೆಳಕಿನ ಕೊರತೆ ಬಗ್ಗೆ, ಸಂತೆಗಳಲ್ಲಿ ಪಿಕ್ ಪಾಕೆಟರ್ ಹಾವಳಿ ತಪ್ಪಿಸಲು ಸಿಸಿ ಕ್ಯಾಮರಾ ಅಳವಡಿಕೆ, ನ ತ್ಯಾಜ್ಯ ವಸ್ತು ಸಂಗ್ರಹ, ಯುಜಿಡಿ ಕೆಲಸ ಸರಿಯಾಗಿ ನಡೆಯದೇ ಇರುವ ಬಗ್ಗೆ ಚರ್ಚೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net