ಅಕ್ಕಿಆಲೂರಲ್ಲಿ 32ನೇ ಕನ್ನಡ ನುಡಿ ಸಂಭ್ರಮ ಫೆ. 1ರಿಂದ

AKKIALUR
Published on

ಅಕ್ಕಿಆಲೂರ: ಪಟ್ಟಣದ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘ ಆಯೋಜಿಸುವ 32ನೇ ಕನ್ನಡ ನುಡಿ ಸಂಭ್ರಮವನ್ನು ಸ್ಥಳೀಯ ಮುತ್ತಿನಕಂತಿಮಠದ ಆವರಣದಲ್ಲಿ ಫೆಬ್ರವರಿ 1, 2 ಮತ್ತು 3ರಂದು ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರಂಭವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ಸ್ಥಳೀಯ ಜ್ಞಾನ ಭಾರತಿ ಶಾಲೆಯಲ್ಲಿ 32ನೇ ಕನ್ನಡ ನುಡಿ ಸಂಭ್ರಮದ ಕುರಿತು ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮೂರು ದಿನಗಳ ಕಾಲ ಹಗಲು, ರಾತ್ರಿ ನಿರಂತರವಾಗಿ ವಿವಿಧ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಸಮಾರಂಭ ಆಚರಿಸಲಾಗುತ್ತಿದೆ. ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಕುರಿತು ವಿಶ್ಲೇಷಣೆ ಜರುಗಲಿದ್ದು, ಭುವನೇಶ್ವರಿ ದೇವಿ ಶೋಭಾಯಾತ್ರೆ, ದಿಗ್ಗಜರ ಸಮ್ಮುಖದಲ್ಲಿ ಸಮಾರಂಭದ ಉದ್ಘಾಟನೆ ನಡೆಯಲಿದೆ. ವೇದಿಕೆ, ಪ್ರಚಾರ, ವಸತಿ, ಊಟ, ಅತಿಥಿ ಸತ್ಕಾರ, ಮೆರವಣಿಗೆ ಸೇರಿ ವಿವಿಧ ಸಮಿತಿ ರಚಿಸಲಾಗಿದೆ. ಈ ಬಾರಿಯ ನುಡಿ ಸಂಭ್ರಮದ ಸಂಚಾಲಕರಾಗಿ ಜ್ಞಾನ ಭಾರತಿ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು.

ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದುಂಡಿ ಬಸವೇಶ್ವರ ಜನಪದ ಕಲಾಸಂಘದ ಅಧ್ಯಕ್ಷ ಬಸವರಾಜ ಕೋರಿ, ಗ್ರಾಪಂ ಅಧ್ಯಕ್ಷ ಮಕ್ಬೂಲಸಾಬ್ ರುಸ್ತುಂಖಾನವರ, ಜ್ಞಾನ ಭಾರತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ, ಸದಾನಂದ ಉಡುಪ, ಸುಜಾತಾ ಕೊಲ್ಲಾವರ, ಕಿರಣ ರಾಜೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net