

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಸುರಿದ ಮಳೆಗೆ 32 ಮನೆಗಳು ಭಾಗಶಃ, 14 ಜಾನುವಾರುವಿಗೆ ಹಾನಿ ಉಂಟಾಗಿದೆ. 19 ಮನೆಗಳಿಗೆ ನೀರು ನುಗ್ಗಿದೆ. ಶುಕ್ರವಾರ ಕೂಡ ಕೆಲವೆಡೆ ಹದ ಮಳೆಯಾಗಿದೆ.
ಮಧ್ಯಾಹ್ನದ ನಂತರ ಹಲವೆಡೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 5ರ ನಂತರ ಜಿಟಿಜಿಟಿಯಾಗಿ ಆರಂಭವಾಯಿತು.
ಚಿತ್ರದುರ್ಗ 11, ಚಳ್ಳಕೆರೆ 5, ಹೊಳಲ್ಕೆರೆ 1, ಮೊಳಕಾಲ್ಮೂರು ತಾಲೂಕಿನಲ್ಲಿ 15 ಮನೆಗಳು ಭಾಗಶಃ, 2 ಹೆಕ್ಟೇರ್ ತೋಟಗಾರಿಕೆ ಬೆಳೆ, ಹೊಸದುರ್ಗ 9 ಸೇರಿ ಒಟ್ಟು 14 ಜಾನುವಾರುವಿಗೆ ಹಾನಿ ಉಂಟಾಗಿದೆ.
ಮೊಳಕಾಲ್ಮೂರು ತಾಲೂಕಿನ ರಾಯಾಪುರದಲ್ಲಿ 80 ಮಿ.ಮೀ ಮಳೆಯಾಗಿದ್ದು, ಇದು ಗುರುವಾರ ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.
ಮೊಳಕಾಲ್ಮೂರು-49, ಬಿ.ಜಿ.ಕೆರೆ-32.4, ರಾಂಪುರ-62.2, ದೇವಸಮುದ್ರ-50.2, ಚಿತ್ರದುರ್ಗ-11.5, ತುರುವನೂರು- 73.4, ಐನಹಳ್ಳಿ 12.6, ಹಿರಿಯೂರು-10.6, ಸುಗೂರು 26.2 ಮಿ.ಮೀ ಮಳೆಯಾಗಿದೆ.
ಬಾಬ್ಬೂರು-10.2, ಈಶ್ವರಗೆರೆ-46.8, ಇಕ್ಕನೂರು-28.2, ಹೊಸದುರ್ಗದಲ್ಲಿ 24.6, ಮತ್ತೋಡು 18.4, ಚಳ್ಳಕೆರೆ-23.2, ಪರುಶುರಾಂಪುರ-41.2, ನಾಯಕನಹಟ್ಟಿ-77.4, ತಳಕು-34.4, ಡಿ.ಮರಿಕುಂಟೆ 13.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.