ಉದ್ಯೋಗಿ ಸೋಗಿನಲ್ಲಿ 32 ಲಕ್ಷ ರೂ. ವಂಚಿಸಿದ ಭೂಪ

cyber crime
Published on

ಹುಬ್ಬಳ್ಳಿ: ಥರ್ವೆಕ್ಸ್ ಕಂಪನಿ ಉದ್ಯೋಗಿ ಸೋಗಿನಲ್ಲಿ ಸ್ವಿಮ್್ಸ ಟೆಕ್ನಾಲಜಿ ಕಂಪನಿಗೆ ಕರೆ ಮಾಡಿದ ಭೂಪನೊಬ್ಬ, ನಕಲಿ ಇ-ಮೇಲ್ ಐಡಿ ಹಾಗೂ ಬ್ಯಾಂಕ್ ಖಾತೆಗಳನ್ನು ನೀಡಿದ್ದಾನೆ. ಒಟ್ಟು 32,98,631 ರೂ. ವರ್ಗಾಯಿಸಿಕೊಂಡಿದ್ದು, ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಸ್ವಿಮ್್ಸ ಟೆಕ್ನಾಲಜಿ ಕಂಪನಿಯು ವಾಲ್ಸ್ ತಯಾರಿಸಿ, ಥರ್ವೆಕ್ಸ್ ಕಂಪನಿಗೆ ಮಾರಾಟ ಮಾಡಿ ಹಣ ಪಡೆಯುತ್ತಿತ್ತು. ಥರ್ವೆಕ್ಸ್ ಕಂಪನಿಯ ನಿಥಿನ್ ಎನ್ನುವರು, 32,98,631 ರೂ.ನಂತೆ ಎರಡು ಬಾರಿ ಆನ್​ಲೈನ್ ಮೂಲಕ ಸ್ವಿಮ್್ಸ ಕಂಪನಿಗೆ ಹಣ ವರ್ಗಾಯಿಸಿದ್ದರ ಕುರಿತು ಮಾಹಿತಿ ನೀಡಿದ್ದರು. ಮರಳಿ 32,98,631 ರೂ. ನಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಸುವಂತೆ ಸ್ವಿಮ್್ಸ ಕಂಪನಿಗೆ ಫೋನ್ ಮೂಲಕ ತಿಳಿಸಿದ್ದರು. ನಂತರ ಥರ್ವೆಕ್ಸ್ ಕಂಪನಿ ಉದ್ಯೋಗಿ ಎಂದು ಮಧ್ಯೆ ಪ್ರವೇಶಿಸಿದ ಆಗಂತುಕನೊಬ್ಬ, ಸ್ವಿಮ್್ಸ ಟೆಕ್ನಾಲಜಿ ಸೇಲ್ಸ್ ಮ್ಯಾನೇಜರ್​ಗೆ ನಕಲಿ ಇ-ಮೇಲ್ ಐಡಿ ಹಾಗೂ ಬ್ಯಾಂಕ್ ಖಾತೆ ನೀಡಿ, ಹಣ ವರ್ಗಾಯಿಸುವಂತೆ ಇ-ಮೇಲ್ ಮಾಡ್ದಿದಾನೆ. ನಂತರ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net