ಬಿಳಿಗಿರಿರಂಗನಬೆಟ್ಟ ಹುಂಡಿಯಲ್ಲಿ 32.02 ಲಕ್ಷ ರೂ. ಸಂಗ್ರಹ

30 yelandur 03
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಬಿಳಿಗಿರಿಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಹುಂಡಿಯಲ್ಲಿ 32.02 ಲಕ್ಷ ರೂ. ಸಂಗ್ರಹವಾಗಿದೆ.

ಶುಕ್ರವಾರ ದೇಗುಲದ ಆವರಣದಲ್ಲಿ ಹುಂಡಿ ಹಣ ಎಣಿಕೆ ನಡೆಯಿತು. ಇದರಲ್ಲಿ ನಗದು 30.50 ಲಕ್ಷ ರೂ. ಹಾಗೂ ನಾಣ್ಯಗಳು 1.52 ಲಕ್ಷ ರೂ. ಕಾಣಿಕೆ ಬಿದ್ದಿದೆ. ಇದಲ್ಲದೆ 40 ಅಮೆರಿಕನ್ ಡಾಲರ್‌ಗಳನ್ನು ಕೂಡ ಭಕ್ತರು ದೇವರ ಹುಂಡಿಗೆ ಸಮರ್ಪಿಸಿದ್ದಾರೆ. ಈ ಎಣಿಕೆ ಕಾರ್ಯದಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ನೇತೃತ್ವದಲ್ಲಿ ಇವರ ನೌಕರ ವರ್ಗ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net