31ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Talikote_ On behalf of the town's Gururaja Bhajan Board
ಗುರುರಾಘವೇಂದ್ರ ಸ್ವಾಮೀಜಿ
Published on

ತಾಳಿಕೋಟೆ: ಪಟ್ಟಣದ ಗುರುರಾಜ ಭಜನಾ ಮಂಡಳಿಯವರ ವತಿಯಿಂದ ಆ. 31ರಿಂದ ಸೆಪ್ಟೆಂಬರ್ 2ರವರೆಗೆ ನಗರೇಶ್ವರ ದೇವಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 49ನೇ ಆರಾಧನಾ ಮಹೋತ್ಸವವು ಭಕ್ತಿಭಾವದೊಂದಿಗೆ ಜರುಗಲಿದೆ.

ಆ. 31ರಂದು ಪೂರ್ವಾರಾಧನೆ ಅಂಗವಾಗಿ ನಸುಕಿನ ಜಾವ 5ರಿಂದ 6ರವರೆಗೆ ಸುಪ್ರಭಾತ, 7ರಿಂದ 8ರವರೆಗೆ ನಗರೇಶ್ವರ ರುದ್ರಾಭಿಷೇಕ, ಅಲಂಕಾರ ಅರ್ಚನೆ ಜರುಗಲಿದೆ. 8ರಿಂದ 10ರವರೆಗೆ ಗುರುರಾಯರ ಅಷ್ಟೋತ್ತರ ನವಗ್ರಹ ಹೋಮ, ಮಧ್ಯಾಹ್ನ 1ರಿಂದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಂಗಳಾರತಿ, ತೀರ್ಥ, ಪ್ರಸಾದ, ಸಂಜೆ 7ಕ್ಕೆ ಭಜನೆಯೊಂದಿಗೆ ಪಲ್ಲಕ್ಕಿ ಸೇವೆ ಮಂತ್ರಪುಷ್ಪ ಜರುಗಲಿದೆ.

ಸೆ. 1ರಂದು ಮಧ್ಯಾರಾಧನೆ ನಿಮಿತ್ತ ನಸುಕಿನ ಜಾವ 5ರಿಂದ 6ರವರೆಗೆ ಸುಪ್ರಭಾತ, 7ರಿಂದ 8ರವರೆಗೆ ನಗರೇಶ್ವರ ರುದ್ರಾಭಿಷೇಕ, ಅಲಂಕಾರ ಅರ್ಚನೆ ಜರುಗುವುದು. 8ರಿಂದ 10ರವರೆಗೆ ಪಂಚಾಮೃತ ಅಭಿಷೇಕ, ಗುರುರಾಯರ ಅಷ್ಟೋತ್ತರ, 10ರಿಂದ 1ರವರೆಗೆ ಪವಮಾನ ಹೋಮ, ಪೂರ್ಣಾಹುತಿ, ಮಧ್ಯಾಹ್ನ 1ರಿಂದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ, ಪ್ರಸಾದ ಜರುಗುವದು. ಸಂಜೆ 7ರಿಂದ ಭಜನೆಯೊಂದಿಗೆ ಪಲ್ಲಕ್ಕಿ ಸೇವೆ ಮಂತ್ರಪುಷ್ಪ ಜರುಗುವುದು.

ಸೆ. 2ರಂದು ಉತ್ತರಾಧನೆ ಅಂಗವಾಗಿ ನಸುಕಿನ ಜಾವ 5ರಿಂದ 6ರವರೆಗೆ ಸುಪ್ರಭಾತ, 7ರಿಂದ 8ರವರೆಗೆ ರುದ್ರಾಭಿಷೇಕ, ಅಲಂಕಾರ ಅರ್ಚನೆ, 8ರಿಂದ 10ರವರೆಗೆ ಪಂಚಾಮೃತ ಅಭಿಷೇಕ, ಗುರುರಾಯರ ಅಷ್ಟೋತ್ತರ ರಥಪೂಜೆ, ಮಧ್ಯಾಹ್ನ 1ರಿಂದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ, ಪ್ರಸಾದ ಜರುಗುವುದು. ಸಂಜೆ 5ಕ್ಕೆ ರಥದಲ್ಲಿ ಗುರು ಸಾರ್ವಭೌಮರ ಭಾವಚಿತ್ರದ ಮೆರವಣಿಗೆಯು ನಗರೇಶ್ವರ ದೇವಾಲಯದಿಂದ ಸಕಲ ವಾದ್ಯ ವೈಭವಗಳೊಂದಿಗೆ ವಿಠ್ಠಲ ಮಂದಿರ ತಲುಪಿ ಪುನಃ ಅದೇ ಮಾರ್ಗವಾಗಿ ನಗರೇಶ್ವರ ದೇವಾಲಯ ತಲುಪುವುದು. ರಾತ್ರಿ 8ರಿಂದ ಭಜನಾ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net