

ಚಿತ್ರದುರ್ಗ:ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಆ.31ರಂದು ಬೆಳಗ್ಗೆ 10ರಿಂದ 2ರವರೆಗೆ ನೇರ ನೇಮಕಕ್ಕೆ ಸಂದರ್ಶನ ನಡೆಯಲಿದೆ.
ವಿವಿಧ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಎಸ್ಸೆಸ್ಸೆಲ್ಸಿ,ಪಿಯುಸಿ,ಐಟಿಐ,ಡಿಪ್ಲೊಮಾ,ಪದವೀಧರ 18ರಿಂದ 30 ವರ್ಷ ದೊಳಗಿನ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ವಿನಿಮಯ ಕೇಂದ್ರ ಕಚೇರಿ(70224 59064)ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.