

ಚಿತ್ರದುರ್ಗ: ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಆ.31ರಂದು ಆಚರಿಸಲು ಎಡಿಸಿ ಬಿ.ಟಿ.ಕುಮಾರ ಸ್ವಾಮಿ ಅಧ್ಯಕ್ಷತೆ ಡಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ನಿರ್ಧರಿಸಿದೆ. ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತಿತರ ಇಲಾಖೆಗಳು ಹಾಗೂ ನಗರಸಭೆ ಅಂದು ಈ ಮಹನೀಯರ ಜಯಂತಿ ಆಚರಿಸಲಾಗುವುದು ಎಂದು ಕುಮಾರ ಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ,31ರಂದು ಮಧ್ಯಾಹ್ನ 1ಗಂಟೆಗೆ ನಗ ರದ ತರಾಸು ರಂಗಮಂದಿರದಲ್ಲಿ ನುಲಿಯ ಚಂದಯ್ಯ ಜಯಂತಿ ಕಾರ‌್ಯಕ್ರಮ ಏರ್ಪಡಿಸಲಾಗುವುದು. ಕಾರ‌್ಯಕ್ರಮದ ಅಂಗವಾಗಿ ಅಂ ದು ಬೆಳಗ್ಗೆ 10ಕ್ಕೆ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ರಂಗಮಂದಿರದವರೆಗೆ ಮೆರವಣಿಗೆ ಇರುತ್ತದೆ. ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸವಿರುತ್ತದೆ ಎಂದರು.
31ರಂದು ಬೆಳಗ್ಗೆ 11ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ನಗರದ ಜಿಲ್ಲಾ ಆರ್ಯ ಈಡಿಗರ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಗುವುದೆಂದು ಮಲ್ಲಿಕಾರ್ಜುನ್ ತಿಳಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸವಿರುತ್ತದೆ.
ಕೊರಚ ಕೊರಮ ಸಮಾಜದ ಮುಖಂಡರಾದ ಕೆ.ಕೃಷ್ಣಪ್ಪ,ದಾರುಕೇಶ್,ರಾಮಪ್ಪ,ತಿಪ್ಪೇಸ್ವಾಮಿ,ಪರಮೇಶ್ವರಪ್ಪ,ಶಿವಮೂರ್ತಿ,ವೈ. ಕು ಮಾರ್,ಧನಂಜಯ,ಹನುಮಂತಪ್ಪ,ಹುಚ್ಚಪ್ಪ,ಮಂಜುನಾಥ್,ಪುಷ್ಟರಾಜ್,ಪಿಐ ನಯೀಂಅಹ್ಮದ್,ಆರ್ಯ ಈಡಿಗರ ಸಮಾಜದ ಮು ಖಂಡರಾದ ಎಚ್.ಜೀವನ್,ಮಂಜುನಾಥ್,ಶಿವಮಂಜುನಾಥ್,ಡಿ.ಸ್ವಾಮಿ,ಮಹಾರುದ್ರಪ್ಪ,ವೆಂಕಟೇಶ್,ಶ್ರೀನಿವಾಸ್,ರಂಗಕರ್ಮಿ ಕೆಪಿ ಎಂಗಣೇಶಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು,ಇತರೆ ಮುಖಂಡರು ಇದ್ದರು.
(ಎಡಿಸಿ 21 ಬಿ.ಟಿ.ಕುಮಾರ ಸ್ವಾಮಿ)