ಮೈಸೂರು: ತಾಲೂಕಿನ ಇಲವಾಲ ಬಳಿಯ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅ. 31ರಂದು ಸ್ವಯಂ ಉದ್ಯೋಗಕ್ಕಾಗಿ ಅಣಬೆ ಕೃಷಿ ತರಬೇತಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ತರಬೇತಿ ಆರಂಭಗೊಳ್ಳಲಿದೆ. ನುರಿತ ವಿಜ್ಞಾನಿಗಳು, ಅನುಭವಿ ಕೃಷಿಕರು, ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಎದುರಿಸುವ ಸಮಸ್ಯೆ ಮತ್ತು ಅದರ ಪರಿಹಾರದ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳ ಆಸಕ್ತ ರೈತರು ಭಾಗವಹಿಸಬಹುದು. ನೋಂದಣಿ ಹಾಗೂ ಮಾಹಿತಿಗಾಗಿ ಮೊಬೈಲ್ 8147959226 ಸಂಪರ್ಕಿಸಬಹುದು.