

ವಿಜಯಪುರ: ನಗರ ಹೊರ ವಲಯದ ಭವರೋಗ ವೈದ್ಯರೆಂದೇ ಪ್ರಖ್ಯಾತರಾದ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ 315ನೇ ಆರಾಧನಾ ಮಹೋತ್ಸವ ಮಾ. 10, ರಿಂದ ಮಾ. 12 ರವರೆಗೆ ನಡೆಯಲಿದೆ.
ಮಾ. 8 ರಂದು ಮಹಾರುದ್ರ ಅಭಿಷೇಕ ಹಾಗೂ ಮಾ. 9 ರಂದು ವೈದಿಕ ವೃಂದದಿಂದ ಲು ರುದ್ರಸ್ವಾಹಾಕಾರ ಜರುಗಲಿದೆ. ಮಾ. 10 ರಂದು ಏಕಾದಶಿಯ ದಿನ ಬೆಳಗ್ಗೆ 8.30ಕ್ಕೆ ರುಕ್ಮಾಂಗದ ಪಂಡಿತರ ಪಲ್ಲಕ್ಕಿ ಸೇವೆ ಗುಜ್ಜರ ಗಲ್ಲಿಯ ವಿಠ್ಠಲ ಮಂದಿರದಿಂದ ದಿವಟಗೇರಿ ಗಲ್ಲಿಯ ಆದರ್ಶ ಬ್ರಾಹ್ಮಣ ವಿದ್ಯಾರ್ಥಿ ನಿಲಯದವರೆಗೆ ಜರುಗಲಿದೆ. ಅಂದು ಸಂಜೆ 6ಕ್ಕೆ ಶ್ರೀ ೇತ್ರ ಕುಪಗಡ್ಡಿಯ ಶ್ರೀ ಸದ್ಗುರು ರಂಗರಾವ ಮಹಾರಾಜರು ಭಕ್ತ ವೃಂದದಿಂದ ಸತ್ಸಂಗ ಮತ್ತು ರಾತ್ರಿ 9ಕ್ಕೆ ವಾರಕರಿ ಭಜನೆ ಜರುಗಲಿದೆ.
ಮಾ. 11 ರಂದು ಬೆಳಗ್ಗೆ 5ಕ್ಕೆ ಸುಪ್ರಭಾತ, ಮಂಗಲವಾದ್ಯ, 6ಕ್ಕೆ ದೇವತಾರ್ಚನೆ. 7ಕ್ಕೆ ಮಹಾಭಿಷೇಕ, 9ಕ್ಕೆ ಶಾರದಾ ಮಹಿಳಾ ಮಂಡಳದಿಂದ ಲಲಿತಾ ಸಹಸ್ರನಾಮ ಪಠಣ, 10ಕ್ಕೆ ಗುರುಮಂಡಲ ಪೂಜೆ, ನೈವೇದ್ಯ ಹಾಗೂ ಆರತಿ ಮಧ್ಯಾಹ್ನ 12ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ಸ್ಥಳಿಯ ಕಲಾವಿದರಿಂದ ಸೇವೆ ಹಾಗೂ ಭಜನೆ ರಾತ್ರಿ ಮಂಗಳಾರತಿ ಮಂತ್ರಪುಷ್ಪ ಜರುಗಲಿವೆ.
ಮಾ. 12 ರಂದು ಬೆಳಗ್ಗೆ 7ಕ್ಕೆ ಅಭಿಷೇಕ, ಮಂಗಳಾರತಿ ನಡೆದು ನಂತರ ಚಂದ್ರಿಕಾ ಭಜನಾ ಮಂಡಳಿಯಿಂದ ಭಜನೆ, ಸಂಗೀತ ಸೇವೆ ನಡೆಯಲಿದೆ. ಮಧ್ಯಾಹ್ನ ಗೋಪಾಳ ಕಾವಲಿ ಅವಭೃತ ಸ್ನಾನ, ಆರತಿ ನೈವೇದ್ಯ ಮಂತ್ರಪುಷ್ಪ ಜರುಗಲಿದ್ದು, ಸಂಜೆ 6ಕ್ಕೆ ಭಕ್ತೀಗಿತೆಗಳ ಗಾಯನ ನಡೆಯಲಿವೆ ಎಂದು ಟ್ರಸ್ಟ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ತಪಾಸಣಾ ಶಿಬಿರಗಳು : ಆರಾಧನಾ ಮಹೋತ್ಸವದ ಅಂಗವಾಗಿ ಮಾ. 11 ಬೆಳಗ್ಗೆ 10ಕ್ಕೆ ಬ್ರಾಹ್ಮಣ ಸಮಾಜ ಸೇವಾ ಸಂ ಹಾಗೂ ರಕ್ತ ನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ನೇತ್ರತಜ್ಞ ಡಾ. ಗುರುರಾಜ ಕುಲಕರ್ಣಿ ಅವರಿಂದ ನೇತ್ರ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಾ. 12 ರಂದು ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ಕೊಲ್ಹಾಪುರದ ಸದ್ಗುರು ವಿಶ್ವನಾಥ ಮಹಾರಾಜ ರುಕಡಿಕರ ಟ್ರಸ್ಟ್ ವತಿಯಿಂದ ಉಚಿತ ಆಯುರ್ವೇದ ವೈದ್ಯಕಿಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.