

ಕೊಕ್ಕರ್ಣೆ: ಉಡುಪಿ ಜಿಲ್ಲೆಯಲ್ಲಿ 46 ಕುಡುಬಿ ಕೂಡುಕಟ್ಟುಗಳಿದ್ದು 3112 ಮಂದಿ ಹೋಳಿ ವೇಷ ಧರಿಸಿದ್ದಾರೆ. ಪ್ರಧಾನ ಕಚೇರಿ ಶಿರೂರು ಮೂರ್ಕೈಯಲ್ಲಿ 2022ರಿಂದ ಎಲ್ಲ ಕೂಡುಕಟ್ಟು ಜನರನ್ನು ಕರೆಸಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಜನರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸ ಕಾರಣ ಎಂದು ಶ್ರೀ ಮಲ್ಲಿಕಾರ್ಜುನ ಸೊಸೈಟಿ ಶಿರೂರು ಮೂರ್ಕೈ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.
ಮೂರ್ಕೈ ಶಿರೂರು ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಹಲವು ಕೂಡುಕಟ್ಟುಗಳ ಹೋಳಿ ಆಚರಣೆಯಲ್ಲಿ ಕೂಡುಕಟ್ಟುಗಳ ಗುರಿಕಾರರನ್ನು ಸನ್ಮಾನಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಸಿದ್ಧಾರ್ಥ ಹಿಲಿಯಾಣ, ನಿರ್ದೇಶಕ ದಿನೇಶ್ ನಾಯ್ಕ, ಮಾಜಿ ನಿರ್ದೇಶಕರಾದ ಚಂದ್ರ ನಾಯ್ಕ ಶಿರೂರು ಮೂರ್ಕೈ, ಬಾಬಣ್ಣ ನಾಯ್ಕ ನಾಲ್ಕೂರು ಹಾಗೂ ಬಾರಾಳಿ ಮಂದಾರ್ತಿ, ನರಿಕೊಡ್ಲು ಹಿಲಿಯಾಣ, ಮಾರ್ವಿ ವಂಡಾರು, ಹೊರಳಿಜೆಡ್ಡು ಹೆಗ್ಗುಂಜೆ, ನಕ್ತನಕೊಡಿ ಹೆಗ್ಗುಂಜೆ, ಕಂಡಿಕೆ ನಡೂರು ಕೂಡುಕಟ್ಟುಗಳ ಗುರಿಕಾರರು, ಸದಸ್ಯರು, ಸಂಘದ ಸಿಬ್ಬಂದಿ ವರ್ಗ, ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಕುಡುಬಿ ಜನಾಂಗದ ಆರ್ಥಿಕ ಅಭಿವೃದ್ಧಿಗಾಗಿ ಪ್ರಾರಂಭಿಸಿದ ಸಂಸ್ಥೆ ಇಂದು ಅಭಿವೃದ್ಧಿ ಪಥದಲ್ಲಿದೆ. ಕುಡುಬಿ ಸಮಾಜದ ಧಾರ್ಮಿಕ ಆಚರಣೆಗಳಲ್ಲಿ ಹೋಳಿ ವಿಶಿಷ್ಟ ಸ್ಥಾನ ಪಡೆದಿದೆ. ಸಂಸ್ಥೆ ಪ್ರಾರಂಭದಿಂದಲೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. -ನರಸಿಂಹ ನಾಯ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ. https://www.vijayavani.net/strength-increases-through-meditation-on-anjaneya https://www.vijayavani.net/strength-increases-through-meditation-on-anjaneya https://www.vijayavani.net/holi-celebrations-in-full-swing-in-gangolli