

ಕೋಲಾರ: ಹಿಜಾಬ್ ವಿವಾದ ಬದಿಗಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿ ಪರೀಕ್ಷೇ ಬರೆದರು. ಸೋಮವಾರ ಜಿಲ್ಲೆಯಾದ್ಯಂತ 84 ಕೇಂದ್ರಗಳಲ್ಲಿ ಪ್ರಥಮ ಭಾಷೆ ಪರೀಕ್ಷೇ ನಡೆದಿದ್ದು, 310 ವಿದ್ಯಾರ್ಥಿಗಳು ಗೈರಾಗಿದ್ದರು.
ಮನೆಗಳಿಂದ ಹಿಜಾಬ್ ಧರಿಸಿ ಬಂದಿದ್ದ ಹೆಣ್ಣು ಮಕ್ಕಳು ಶಿಕ್ಷಣ ಇಲಾಖೆ ಸಿಬ್ಬಂದಿ, ಪೊಲೀಸರ ಮನವಿ ಮೇರೆಗೆ ಹಿಜಾಬ್ ತೆಗೆದು ಪರೀಕ್ಷೇಗೆ ಹಾಜರಾದರು. ಮುಂಜಾಗ್ರತೆಯಾಗಿ ಎಲ್ಲ ಕೇಂದ್ರಗಳ ಬಳಿ ಬಂದೋಬಸ್ತ್ ಮಾಡಲಾಗಿತ್ತು. ಮೊದಲ ದಿನ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ ನಡೆದಿರುವುದಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಉಕೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ ಪರೀಕ್ಷಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀೆಗೆ ಬರುವ ಮಕ್ಕಳಿಗೆ ಸ್ವತ ಥರ್ಮಲ್ ಸ್ಕ್ರೀನಿಂಗ್ ಮಾಡಿ ಶುಭ ಕೋರಿದ ಡಿಡಿಪಿಐ ಕೃಷ್ಣಮೂರ್ತಿ, ಮುಸ್ಲಿಂ ಹೆಣ್ಣು ಮಕ್ಕಳು ಹಾಗೂ ಪಾಲಕರು ಹೈಕೋರ್ಟ್ ಆದೇಶ ಪಾಲಿಸುವ ಮೂಲಕ ಸಮವಸ ನೀತಿಗೆ ಗೌರವ ಸೂಚಿಸಿದ್ದಾರೆ. 2020ರ ಮಾರ್ಚ್ನಲ್ಲಿ ನಡೆದಿದ್ದ ಪರೀೆಗೆ 678 ವಿದ್ಯಾರ್ಥಿಗಳು ಮೊದಲ ದಿನ ಗೈರಾಗಿದ್ದರು, ಆದರೆ ಈ ಬಾರಿ ಅದರ ಪ್ರಮಾಣ 310ಕ್ಕೆ ಇಳಿದಿದೆ ಎಂದರು.
ಕೇಂದ್ರದ ಸಮೀಪ ಮಕ್ಕಳು ಪಾಲಕರೊಂದಿಗೆ ಹಿಜಾಬ್ ಧರಿಸಿಯೇ ಬಂದಿದ್ದು ನೋಡಿ, ಗೊಂದಲಕ್ಕೆಡೆಯಾಗುವ ಆತಂಕ ಇತ್ತಾದರೂ, ವಿದ್ಯಾರ್ಥಿಗಳು ಪ್ರತಿರೋಧ ತೋರಲಿಲ್ಲ. ಇದೇ ಸಂದರ್ಭದಲ್ಲಿ ಹಿಜಾಬ್ ಧರಿಸಿ ಬಂದಿದ್ದ ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಹಿಜಾಬ್ ತೆಗೆದಿಟ್ಟು ಕರ್ತವ್ಯ ನಿರ್ವಹಿಸಿ ಮಾದರಿಯಾದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಗುಂಪು ಸೇರುವುದನ್ನು ತಡೆಯಲು 10.30ಕ್ಕಿರುವ ಪರೀೆಗೆ ಬೆಳಗ್ಗೆ 9.30ರಿಂದಲೇ ಕೇಂದ್ರದೊಳಗೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರು ಬರುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸ್ ಹಾಕಿದರು.
ಜಿಲ್ಲಾಧಿಕಾರಿ, ಜಿಪಂ ಸಿಇಒ ಭೇಟಿ: ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವೆಂಕಟ್ರಾಜಾ, ಜಿಪಂ ಸಿಇಒ ಉಕೇಶ್ ಕುಮಾರ್, ರಾಜ್ಯ ಜಂಟಿ ನಿರ್ದೇಶಕರೂ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿಗಳಾದ ಎಸ್.ಜಿ.ನಾಗೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಡಿಡಿಪಿಐ ಕೃಷ್ಣಮೂರ್ತಿ, ಪರೀಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮತ್ತಿತರರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರಲ್ಲದೆ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಿದರು. ಜಿಲ್ಲಾದ್ಯಂತ ನಡೆದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಉರ್ದು ಪರೀೆಗೆ ಹೆಸರು ನೋಂದಾಯಿಸಿದ್ದ 19929 ವಿದ್ಯಾರ್ಥಿಗಳ ಪೈಕಿ 19619 ಮಂದಿ ಹಾಜರಾಗಿದ್ದು, ಪರೀೆ ಸುಗಮವಾಗಿ ನಡೆದಿದೆ ಎಂದು ನೋಡಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದರು.
ತಾಲೂಕುವಾರು ಮಾಹಿತಿ: ಬಂಗಾರಪೇಟೆ ತಾಲೂಕಿನ 13 ಕೇಂದ್ರಗಳಲ್ಲಿ 3398 ಮಂದಿ ನೋಂದಾಯಿಸಿದ್ದು, 3317 ಮಂದಿ ಹಾಜರಾಗಿ 81 ಮಂದಿ ಗೈರಾಗಿದ್ದರು. ಕೆಜಿಎಫ್ ತಾಲೂಕಿನ 9 ಕೇಂದ್ರಗಳಲ್ಲಿ 2600 ಮಕ್ಕಳು ಹೆಸರು ನೋಂದಾಯಿಸಿದ್ದು, 80 ಮಂದಿ ಗೈರಾಗಿದ್ದರು.
ಕೋಲಾರ ತಾಲೂಕಿನ 22 ಕೇಂದ್ರಗಳಲ್ಲಿ 4985 ಮಂದಿ ಹೆಸರು ನೋಂದಾಯಿಸಿದ್ದು 24 ಮಂದಿ ಗೈರಾಗಿದ್ದರು. ಮಾಲೂರು ತಾಲೂಕಿನ 14 ಕೇಂದ್ರಗಳಲ್ಲಿ 2115 ಮಂದಿ ಪೈಕಿ 66 ಮಂದಿ ಗೈರಾಗಿದರೆ, ಮುಳಬಾಗಿಲು ತಾಲೂಕಿನ 13 ಕೇಂದ್ರಗಳಲ್ಲಿ 3051 ಮಂದಿ ನೋಂದಾಯಿಸಿದ್ದು, 44 ಮಂದಿ ಗೈರಾಗಿದ್ದರು. ಶ್ರೀನಿವಾಸಪುರ ತಾಲೂಕಿನ 13 ಕೇಂದ್ರಗಳಲ್ಲಿ 2780 ಮಂದಿ ಹೆಸರು ನೋಂದಾಯಿಸಿದ್ದು, 2765 ಮಂದಿ ಹಾಜರಾಗಿ, 15 ಮಂದಿ ಗೈರಾಗಿದ್ದಾರೆ.