31 ಮನೆಗಳು ಭಾಗಶಃ ಹಾನಿ

rain damage
ಮೂಡಿಗೆರೆ ತಾಲೂಕಿನ ತಳವಾರ ಸಮೀಪ ಮಳೆಗೆ ಮನೆ ಹಾನಿಯಾಗಿರುವುದು.
Published on

ಚಿತ್ರದುರ್ಗ: ಜಿಲ್ಲಾದ್ಯಂತ ಬುಧವಾರ ಸುರಿದ ಮಳೆಗೆ ಚಿತ್ರದುರ್ಗ ತಾಲೂಕಿನಲ್ಲಿ 10, ಹೊಳಲ್ಕೆರೆ-3, ಹೊಸದುರ್ಗ-10, ಹಿರಿಯೂರು-2, ಮೊಳಕಾಲ್ಮುರು-1, ಚಳ್ಳಕೆರೆಯಲ್ಲಿ 5 ಸೇರಿ ಒಟ್ಟು 31 ಮನೆಗಳು ಭಾಗಶಃ, 1 ದೊಡ್ಡ ಜಾನುವಾರುವಿಗೆ ಹಾನಿಯಾಗಿದೆ.

ಈಶ್ವರಗೆರೆಯಲ್ಲಿ 78.6 ಮಿ.ಮೀ ಆಗಿದ್ದು, ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ. ಇಕ್ಕನೂರು 34, ಸುಗೂರು 38, ಚಿತ್ರದುರ್ಗ 49, ಐನಹಳ್ಳಿ 66, ಭರಮಸಾಗರ 25, ತುರುವನೂರು 65, ಸಿರಿಗೆರೆ 38, ರಾಯಾಪುರ 24, ಬಿ.ಜಿ.ಕೆರೆ 37, ಚಳ್ಳಕೆರೆ 26, ಪರಶುರಾಂಪುರ 18, ನಾಯಕನಹಟ್ಟಿ 44, ತಳಕು 57, ಹೊಳಲ್ಕೆರೆ 19, ಚಿಕ್ಕಜಾಜೂರು 21, ಬಿ.ದುರ್ಗ 36, ಎಚ್.ಡಿ.ಪುರ 27, ಹೊಸದುರ್ಗ 17, ಬಾಗೂರು 30, ಮತ್ತೋಡು 15, ಶ್ರೀರಾಂಪುರ 50, ಮಾಡದಕೆರೆ 48.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net