30ರಿಂದ ತರಕಾರಿ ಮಾರುಕಟ್ಟೆ ಬಂದ್

Vegitables
Published on

ಬೆಳಗಾವಿ: ಜನತಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏ .30ರಿಂದ ಮೇ 1ರ ವರೆಗೆ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಬಂದ್ ಮಾಡಲಾಗಿದೆ ಎಂದುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಾ. ಕೆ.ಕೋಡಿಗೌಡ ತಿಳಿಸಿದ್ದಾರೆ.

ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರವು ಏ. 27ರಿಂದಲೇ ಜನತಾ ಕರ್ಫ್ಯೂ ಘೋಷಿಸಿದ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗಿದೆ. ಆ ಜಾಗದಲ್ಲಿ ಬೆಳಗ್ಗೆ 6ರಿಂದ 10ರ
ವರೆಗೆ ವ್ಯಾಪಾರದ ಸಮಯ ನಿಗದಿಪಡಿಸಲಾಗಿದೆ. ರೈತರು, ವ್ಯಾಪಾರಸ್ಥರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net