30ರಿಂದ ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ

Kore
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಅಂಕಲಿ ಗ್ರಾಮದ ಡಾ.ಪ್ರಭಾಕರಣ್ಣಾ ಕೋರೆ ಹುಟ್ಟು ಹಬ್ಬದ ಆಚರಣಾ ಸಮಿತಿಯು ಜು.30ರಿಂದ ಆಗಸ್ಟ್ 1ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.

ಚಿಕ್ಕೋಡಿ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಶಿವಶಕ್ತಿ ಶುಗರ್ಸ ಲಿ., ಯಡ್ರಾಂವ ಹರ್ಮ್ಸ ಡಿಸ್ಟಲರಿ ಪ್ರಾ.ಲಿ. ಡಾ. ಪ್ರಭಾಕರ ಕೋರೆ ಕ್ರೇಡಿಟ್ ಸೌಹಾರ್ದ ಸಹಕಾರಿ ಲಿ., ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ, ಬಿ.ಎಂ.ಕೆ ಆಯುರ್ವೇದಿಕ ಮಹಾವಿದ್ಯಾಲಯ, ಕೆಎಲ್‌ಇ ಹೋಮಿಯೋಪಥಿಕ್ ಮಹಾವಿದ್ಯಾಲಯ, ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಜನಶಕ್ತಿ ಫೌಂಡೇಷನ್, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಗಳತಗಾ ಹಾಗೂ ಶಿರಗುಪ್ಪಿಯಲ್ಲಿರುವ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಜರುಗಲಿವೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯ ಆವರಣದಲ್ಲಿ ಜು.30ರಿಂದ ಆಗಸ್ಟ್ 1ರವರೆಗೆ ಜನ್ಮದಿನದ ಅಮೃತ ಮಹೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕೃಷಿ ವಿಚಾರ ಸಂಕಿರಣ (ಎಕರೆಯಲ್ಲಿ 100 ಟನ್‌ಗಿಂತ ಹೆಚ್ಚು ಕಬ್ಬು ಉತ್ಪಾದನೆ ಮಾಡುವ ಕುರಿತು), ಕೃಷಿ ಉಪನ್ಯಾಸ ( ಸುಸ್ಥಿರ ಹಾಗೂ ಆರೋಗ್ಯವಂತ ಸಮಾಜಕ್ಕಾಗಿ ನೈಸರ್ಗಿಕ- ಸಾವಯವ ಕೃಷಿ), ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮತ್ತು ಕೌಶಲ್ಯಾಭಿವೃದ್ಧಿ ಕುರಿತು ಮಾರ್ಗದರ್ಶನ ಕಾರ್ಯಕ್ರಮ, ಮಹಿಳೆಯರಿಗಾಗಿ ಸ್ತ್ರೀ ಶಕ್ತಿ ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.

ಆಗಸ್ಟ್ 1ರಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಡಾ.ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಆಚರಣೆ ಸಮಾರಂಭದ ಸಾನ್ನಿಧ್ಯವನ್ನು ಚಿಂಚಣಿ ಸಿದ್ದ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಚಿರಮೂರ್ತಿಮಠದ ಸಂಪದನಾ ಸ್ವಾಮೀಜಿ, ಹುಕ್ಕೇರಿ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಕಮತ್ಯಾನಟ್ಟಿ ಪ್ರಭುಲಿಂಗೇಶ್ವರ ಸಂಸ್ಥಾನ ಮಠದ ಗುರುದೇವ ದೇವರು, ಬೆಳಗಾವಿ ಕಾರಂಜಿ ಮಠದ ಡಾ. ಶಿವಯೋಗಿ ದೇವರು ವಹಿಸಲಿದ್ದಾರೆ.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕ ದುರ್ಯೋಧನ ಐಹೊಳೆ ಅವರು ಭಾರತಿ ಸಂಜಯ ಕೋರೆ ಅವರ ವಿರಚಿತ ಡಾ. ಪ್ರಭಾಕರ ಕೋರೆಯವರ ಜೀವನ ಚರಿತ್ರೆ ಆಧಾರಿತ ಶಾರದಾ ಪ್ರಭೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಹಾಗೂ ಡಾ.ಪ್ರಭಾಕರಣ್ಣಾ ಕೋರೆ ಹುಟ್ಟು ಹಬ್ಬದ ಆಚರಣಾ ಸಮಿತಿಯ ಅಧ್ಯಕ್ಷ ಬಿ.ಆರ್. ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಸಹಕಾರ ಮಹಾಮಂಡಳ ನಿರ್ದೇಶಕ ಜಗದೀಶ ಕವಟಗಿಮಠ, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ನಿರ್ದೇಶಕ ಅಮಿತ ಕೋರೆ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಂದ್ರ ನೇರ್ಲಿ, ಮಾರುತಿ ಅಷ್ಟಗಿ, ಕೆಎಲ್‌ಇ ವಿವಿ ಉಪಕುಲಪತಿ ಡಾ.ವಿ.ಎ. ಸಾವೂಜಿ, ಕೆಎಲ್‌ಇ ಆಸ್ಪತ್ರೆಯ ಅಭಿವೃದ್ಧಿ ಯೋಜನಾ ನಿರ್ದೇಶಕ ಡಾ.ವಿ.ಡಿ. ಪಾಟೀಲ, ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಡಾ. ಎ.ಎ.ಕೋಠಿವಾಲೆ, ಡಾ.ಎನ್.ಎಸ್. ಮಹಾಂತ ಶೆಟ್ಟಿ, ಶ್ರೀಕಾಂತ ವೀರಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಪ್ರಭಾಕರಣ್ಣಾ ಕೋರೆ ಹುಟ್ಟು ಹಬ್ಬದ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಭರತೇಶ ಬನವಣೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net