

ಚಿತ್ರದುರ್ಗ:ವಿಶೇಷ ಹುಣ್ಣಿಮೆ ಆ.30ರಂದು ಚಂದ್ರ ಭೂಮಿಗೆ ತುಂಬಾ ಸಮೀಪಕ್ಕೆ ಬರಲಿದ್ದು,ಗಾತ್ರದಲ್ಲಿ ದೊಡ್ಡದಾಗಿ ಹಾಗೂ ಪ್ರಕಾಶ ಮಾ ನವಾಗಿ ಕಾಣಲಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಹೇಳಿದ್ದಾರೆ. ಈ ರೀತಿ 2009ರಲ್ಲಿ ಚಂದ್ರನನ್ನು ನೋಡಲು ಸಾಧ್ಯ ವಾಗಿತ್ತು. ಮತ್ತೆ ಇದೇ ರೀತಿಯಾಗಿ ಚಂದ್ರನನ್ನು ನೋಡಲು 2032ರವರೆಗೂ ಕಾಯ ಬೇಕಾಗುತ್ತದೆ. ವಿಶೇಷ ಹುಣ್ಣಿಮೆ ದಿನ ಕಾಣುವ ಚಂದ್ರ ನನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.