30ರಂದು ದುರ್ಗದಲ್ಲಿ ಜಿಲ್ಲಾ ಮಟ್ಟದ ಕಲೋತ್ಸವ

PHOTO-01--03
Published on

ಚಿತ್ರದುರ್ಗ: ಅಲೆಮಾರಿ,ಅರೆಅಲೆಮಾರಿ ಜನಾಂಗದ ಸಾಹಿತ್ಯ,ಸಾಂಸ್ಕೃತಿಕ ಜಿಲ್ಲಾ ಮಟ್ಟದ ಕಲೋತ್ಸವವನ್ನು ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ಜು. 30 ರಂದು ಕ್ರೀಡಾಭವನದಲ್ಲಿ ಆಯೋಜಿಸಿರುವುದಾಗಿ ರಾಜ್ಯಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರಶೆಟ್ಟಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಮಾ ರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕ,ಒಕ್ಕೂಟದ ಅಧ್ಯಕ್ಷ ತುಕಾರಾಮ ವಾಸ್ಟರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಪ್ರತಿಭೆಗಳ ಪ್ರದರ್ಶನಕ್ಕೆ ಕಲೋತ್ಸವ ವೇದಿಕೆಯಾಗಲಿದೆ.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿ ಗಳು ಹಾಗೂ ಪ್ರತಿಭಾವಂತರು,ಸಾಧಕರನ್ನು ಅಂದು ಸನ್ಮಾನಿಸಲಾಗುವುದು. ಈ ಹಿಂದೆ ಬೆಂಗಳೂರಲ್ಲಿ ರಾಜ್ಯಮಟ್ಟದ ಕಲೋತ್ಸವ ನಡೆ ದಿತ್ತು ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವಧಿ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮ ದ ಅಧ್ಯಕ್ಷನಾಗಿದ್ದಾಗ ಅಲೆಮಾರಿ ಸಮುದಾಯದ ಹೀನಾಯ ಪರಿಸ್ಥಿತಿ ಅರಿತಿದ್ದೇನೆ.ಆಗ ಡೇರೆ ಮುಕ್ತ ಕರ್ನಾಟಕದ ಗುರಿ ತಮ್ಮದಾಗಿತ್ತು, ಆದರೆ ಸಾಧ್ಯವಾಗಿಲ್ಲವೆಂದರು.
ಒಕ್ಕೂಟದ ಪ್ರಧಾನ ಕಾರ‌್ಯದರ್ಶಿ ಒ.ಪ್ರತಾಪ್‌ಜೋಗಿ,ಪ್ರಧಾನ ಸಂಚಾಲಕ ಎಂ.ಪ್ರಕಾಶ್,ಮಹಿಳಾ ಘಟಕದ ಕಾರ‌್ಯಾಧ್ಯಕ್ಷೆ ಇಂದಿರಾ ಇದ್ದರು.

ನಾಳೆ ನೋಟ್‌ಬುಕ್ ವಿತರಣೆ
ಚಿತ್ರದುರ್ಗ:ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ನಗರದ ಪತ್ರಕರ್ತರ ಭವನದಲ್ಲಿ ಜು.8ರಂದು ಮಧ್ಯಾಹ್ನ 12.30ಕ್ಕೆ ನಗರದ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಗುವುದು. ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಕಾರ‌್ಯಕ್ರಮ ಉ ದ್ಘಾಟಿಸುವರು. ವ ಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್,ವಕೀಲರಾದ ಬಿ.ಕೆ.ರಹಮತ್‌ವುಲ್ಲಾ,ದಿಲ್‌ಶಾದ್‌ಉನ್ನೀಸಾ,ಬಿಇಒ ಎಚ್. ಗಿರಿಜಾ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮತ್ತಿತರ ಗಣ್ಯರಿರುತ್ತಾರೆಂದು ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net