30ರಂದು ಗಾಣಿಗರ ಸಂಘದಿಂದ ಪ್ರತಿಭಾಪುರಸ್ಕಾರ

Untitled--009
Published on

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘದಿಂದ ಜಿಲ್ಲಾ ಮಟ್ಟದ ಗಾಣಿಗ ಸಮುದಾಯದ ವಧು-ವರರ ಸಮಾವೇಶ,ಪ್ರತಿಭಾಪುರಸ್ಕಾರ ಸಮಾರಂಭ ಹಾಗೂ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಜೂ.30ರ ಬೆಳಗ್ಗೆ 10.30ಕ್ಕೆ ನಗರದ ಶ್ರೀ ಜಗ ದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಈ ಕಾರ‌್ಯಕ್ರಮದ ಸಾನ್ನಿಧ್ಯವನ್ನು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ವಹಿಸಲಿದ್ದಾರೆ. ಅಥಣಿ ಶಾಸಕ ಎಸ್.ಲಕ್ಷ್ಮಣಸವದಿ ಉದ್ಘಾಟಿಸಲಿದ್ದಾರೆ. ಸಂಘದ ಜಿಲ್ಲಾಕ್ಷರಾದ ಡಿ.ಎಸ್.ಸುರೇಶ್ ಬಾ ಬು ಅಧ್ಯಕ್ಷ ವಹಿಸಲಿದ್ದಾರೆ. ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ,ಬಿ.ಕೆ.ಸಂಗಮೇಶ್,ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ,ಅ.ಭಾ.ಗಾ ಣಿಗರ ಸಂಘದ ರಾಜ್ಯಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ. ವಧು-ವರರ ನೋಂದ ಣಿಗೆ 9449974004/9448803174 ಹಾಗೂ ಹೆಚ್ಚಿನ ಮಾಹಿತಿಗೆ 9449974004 ಸಂಪರ್ಕಿಸುವಂತೆ ಸಂಘದ ತಾಲೂಕು ಎ.ಆರ್.ತಿಪ್ಪೇಸ್ವಾಮಿ ಹಾಗೂ ಕಾರ‌್ಯದರ್ಶಿ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net