

ಮೈಸೂರು: ಶ್ರೀರಾಮಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್ ಮೈಸೂರು ಉತ್ತರ ವತಿಯಿಂದ ವಿವಿ ಮೊಹಲ್ಲಾದ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ 30ನೇ ಶ್ರೀರಾಮನವಮಿ ಸಂಗೀತೋತ್ಸವ ಆಯೋಜಿಸಲಾಗಿದೆ.
12 ರಂದು ಸಂಜೆ 6.15ಕ್ಕೆ ವಿದುಷಿ ವೃಂದ ಆಚಾರ್ಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ವಿ.ಅದಿತಿ ಕೃಷ್ಣ ಪ್ರಕಾಶ್ (ಪಿಟೀಲು), ವಿ.ಅರ್ಜುನ್ ಕುಮಾರ್(ಮೃದಂಗ), ವಿ.ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ. 13 ರಂದು 6.15ಕ್ಕೆ ವಿದ್ವಾನ್ ಸಾಂಕೇಶ್ ರಾಮನ್ ಸಂಗೀತ ಕಛೇರಿ ನಡೆಸಿಕೊಡಲಿದ್ದು, ಡಾ.ನಿಶಾಂತ್ ಚಂದ್ರನ್(ಪಿಟೀಲು), ವಿ.ಅರ್ಜುನ್ ಕುಮಾರ್(ಮೃದಂಗ), ಜಿ.ಎಸ್.ರಾಮಾನುಜನ್(ಘಟಂ) ಸಾಥ್ ನೀಡಲಿದ್ದಾರೆ.
14 ರಂದು ಸಂಜೆ 6.15ಕ್ಕೆ ವಿದ್ವಾನ್ ರಾಹುಲ್ ವೆಲ್ಲಾಲ್ ಸಂಗೀತ ಕಾರ್ಯಕ್ರಮ ನೀಡಲಿದ್ದು, ವಿ.ವೈಭವ್ ರಮಣಿ (ಪಿಟೀಲು), ವಿ.ನಾಗೇಂದ್ರ ಪ್ರಸಾದ್ ಸುಬ್ಬು(ಮೃದಂಗ), ವಿ.ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ.